ನಾಳೆ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಸಪ್ತಪದಿ-2024

0

ಭಾವೀ ವಧುವರರ ಸಮಾಗಮಕ್ಕೆ ಸಜ್ಜಾಗಿದೆ ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ.) ಬೆಂಗಳೂರು ಮಹಿಳಾ ಘಟಕ ಮತ್ತು ಯುವ ಘಟಕದ ಸಹಯೋಗದೊಂದಿಗೆ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ ಜೂ.16 ಭಾನುವಾರ ದಂದು “ನಮ್ಮನೆ” ಸಾಂಸ್ಕೃತಿಕ ಕಲಾ ಕೇಂದ್ರ, ಲಗ್ಗೆರೆ, ಬೆಂಗಳೂರು ಇಲ್ಲಿ ನಡೆಯಲಿದೆ.

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಭಾವೀ ವಧುವರರು ಇಲ್ಲವೇ ಅವರ ಪೋಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧ್ಯಕ್ಷರಾದ ಪಳಂಗಪ್ಪ ಪಾಣತ್ತಲೆ ಮತ್ತು ಆಡಳಿತ ಸಮಿತಿಯವರು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಮಹಿಳಾ ಘಟಕದ ಪದಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ ಶ್ರೀಮತಿ ಶಶಿಪ್ರಭಾ ಮಡ್ತಿಲ 9008949543(ಅಧ್ಯಕ್ಷೆ), ಶ್ರೀಮತಿ ಗಂಗಮ್ಮ ಸುರೇಶ ನೆರಿಯನ 9901151027(ಉಪಾಧ್ಯಕ್ಷೆ), ಶ್ರೀಮತಿ ವನಿತ ರಾಧಾಕೃಷ್ಣ ಗುತ್ತಿಗಾರುಮೂಲೆ- 9483525328(ಕಾರ್ಯದರ್ಶಿ), ಶ್ರೀಮತಿ ರಾಧ ದಾಮೋದರ
ಕುದುಕುಳಿ-9686965288(ಖಜಾಂಚಿ),ಶ್ರೀಮತಿ ಲತಾ
ರಾಜೇಶ್ ಕಟ್ರತನ- 9980627068(ಜಂಟಿ ಕಾರ್ಯದರ್ಶಿ),ಶ್ರೀಮತಿ ಪ್ರಮೋದಿನಿ ನಾಗೇಶ ಉಳುವಾರು ಬಂಟೋಡಿ-9972481373 ವ್ಯವಸ್ಥಾಪಕರರಾದ ಶಿರಕಜೆ ಪೊನ್ನಪ್ಪ 9483742983.