ಕಲ್ಮಡ್ಕ : ಸ್ನಾತಕೋತ್ತರ ಪದವಿಯಲ್ಲಿ ಜಯಲಕ್ಷ್ಮಿ ಎಚ್. ರವರಿಗೆ 1ನೇ ರ‍್ಯಾಂಕ್

0

2024ರಲ್ಲಿ ನಡೆದ ಸ್ನಾತಕೋತ್ತರ ಪದವಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು, ಕಲ್ಮಡ್ಕ ಗ್ರಾಮದ ಜಯಲಕ್ಷ್ಮಿ ಗೆ 1ನೇ ರ‍್ಯಾಂಕ್ ಲಭಿಸಿದೆ.


ಜಯಲಕ್ಷ್ಮಿ ಯವರು ಎಂ.ಎಡ್. ಪದವಿಯನ್ನು ಮಂಗಳೂರಿನ ಕೋಣಾಜೆ ಯುನಿರ್ವಸಿಟಿಯಲ್ಲಿ ಪೂರೈಸಿದ್ದಾರೆ.


ಇವರು ಬಿಎಸ್ಸಿ ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ನಿಂತಿಕಲ್ಲಿನ ಕೆ.ಎಸ್. ಗೌಡ ಕಾಲೇಜಿನಲ್ಲಿ ಪ್ರೌಢಶಿಕ್ಷಣವನ್ನು ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕದಲ್ಲಿ ಪೂರೈಸಿದ್ದಾರೆ. ಬಿ.ಎಡ್. ಶಿಕ್ಷಣವನ್ನು ಕುಂತೂರಿನಲ್ಲಿ ಪೂರೈಸಿದ್ದಾರೆ.
ಇವರು ಕಲ್ಮಡ್ಕ ಗ್ರಾಮದ ಹೊಸಮನೆ ದಿ.ಶ್ರೀಕೃಷ್ಣ ಭಟ್ ಮತ್ತು ಪರಮೇಶ್ವರಿ ದಂಪತಿಗಳ ಪುತ್ರಿ, ಪುತ್ತೂರಿನ ಮುರದಲ್ಲಿರುವ ದಿ.ಗಣಪತಿ ಭಟ್ ಪಲ್ಲತಡ್ಕ ಹಾಗೂ ಭುವನೇಶ್ವರಿ ದಂಪತಿಗಳ ಪುತ್ರ ಕಿರಣ್ ತೇಜಸ್ವಿ ಅವರ ಪತ್ನಿ.