ಕಾಂತಮಂಗಲದಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ

0

ಸ್ಥಳಕ್ಕೆ ಎಸ್.ಪಿ., ಬೆರಳಚ್ಚು ತಜ್ಞರ ಆಗಮನ – ಚುರುಕುಗೊಂಡ ತನಿಖೆ

ಸುಳ್ಯದ ಕಾಂತಮಂಗಲ ಶಾಲಾ‌ ಜಗಲಿಯಲ್ಲಿ ಕೊಲೆಯಾದ ವ್ಯಕ್ತಿ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಎಸ್.ಬಿ. ರಿಷ್ಯಂತ್ ಆಗಮಿಸಿದ್ದಾರೆ.

ಆದರೆ ಶವದ ಪಕ್ಕದಲ್ಲಿ ದೊರೆತ ಸಿಮ್ ಕಾರ್ಡ್ ಆಧಾರದಲ್ಲಿ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಶವ ಬಿದ್ದುಕೊಂಡಿತ್ತು. ಪೋಲೀಸರು ಸ್ಥಳಕ್ಕೆ ಬಂದು‌ ಮಹಜರು ನಡೆಸಿದಾಗ ಶವದ ಪಕ್ಕದಲ್ಲಿ‌ ಮೊಬೈಲ್ ಸಿಮ್ ಕಾರ್ಡ್ ದೊರೆಯಿತು. ಅದನ್ನು ಮೊಬೈಲ್ ಗೆ ಹಾಕಿದಾಗ ಶೇಷಪ್ಪ ಪಂಜ ಎಂದು ಹೆಸರು ಬರುತಿತ್ತೆಂದು ಈ ಆಧಾರದಲ್ಲಿ ಪೋಲೀಸರು ತನಿಖೆ ನಡೆಸುತಿದ್ದಾರೆ.
ಎ.ಎಸ್.ಪಿ ರಾಜೇಂದ್ರ ಡಿ.ಎಸ್., ಡಿವೈಎಸ್ ಪಿ ಅರುಣ್ ನಾಗೇ ಗೌಡ, ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕೆ.ಸತ್ಯನಾರಾಯಣ, ಸುಳ್ಯ ಎಸ್.ಐ. ಮಹೇಶ್ ಪೂಜಾರ್ ಮೊದಲಾದವರಿದ್ದಾರೆ.