ಸುಳ್ಯದಲ್ಲಿ ಪೇಪರ್ ಕದಿಯುತ್ತಿದ್ದ ಕಳ್ಳ ಪೋಲೀಸ್ ವಶ

0

ಸುಳ್ಯದ ಅಂಗಡಿ ಮುಂಭಾಗ ಹಾಕಲಾಗಿದ್ದ ಪೇಪರನ್ನು ಯುವಕನೊಬ್ಬ ಕಳವುಗೈಯುತ್ತಿದ್ದಾಗ ಆತನನ್ನು‌ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ.

ಸೋಮವಾರ ದಿನ ಸುದ್ದಿ ಪತ್ರಿಕೆ ಮಾರಾಟಕ್ಕೆ ಬೆಳಗ್ಗೆ ಏಜೆಂಟ್ ಗಳ ಅಂಗಡಿ ಮುಂದೆ ಇಡಲಾಗುತಿತ್ತು.

ಇದನ್ನು ಎಲಿಮಲೆಯ ಲೀಲಾಧರ್ ಎಂಬಾತ ಕಳವು ಗೈಯುತ್ತಿದ್ದಾಗ ಸ್ಥಳೀಯರ ಮಾಹಿತಿ ಮೇರೆಗೆ ಸುದ್ದಿ‌ಬಿಡುಗಡೆಯ ವರದಿಗಾರರಾದ ಶರೀಫ್ ಜಟ್ಟಿಪಳ್ಳ ಹಾಗೂ ಕುಶಾಂತ್ ಕೊರತ್ಯಡ್ಕರು ಹೋಗಿ ವಿಚಾರಿಸಿ, ಬಳಿಕ ಆ ವ್ಯಕ್ತಿಯನ್ನು ಪೋಲೀಸರ ವಶಕ್ಕೆ ನೀಡಿದ್ದಾರೆ.