ಸುಬ್ರಹ್ಮಣ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಕಸ ವಿಲೇವಾರಿ ಘಟಕ ಭೇಟಿ

0

ದೊಡ್ಡಮಟ್ಟಿನ ಹೋರಾಟ ಮಾಡುತ್ತೇವೆ, ನಿರ್ವಹಣೆ ಮಾಡಲಾಗದಿದ್ದರೆ ಬೇರೆ ಯಾರಿಗಾದರೂ ಬಿಟ್ಟು ಕೊಡಿ : ಕಾಂಗ್ರೆಸ್ ಎಚ್ಚರಿಕೆ

ಕುಕ್ಕೆ ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ರಾಷ್ಟೀಯ ನಾಯಕ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಜೂ.19 ರಂದು ವಿಶೇಷ ಆಂದೋಲನದ ಸಲುವಾಗಿ ಇಂಜಾಡಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಕಸ ವಿಲೇವಾರಿ ಭೇಟಿ ನೀಡಿದ ಸುಬ್ರಹ್ಮಣ್ಯ ಕಾಂಗ್ರೆಸ್ ಪಕ್ಷದ ಸದಸ್ಯರು ಘಟಕದಲ್ಲಿ ಕಸದ ರಾಶಿ ತುಂಬಿಕೊಂಡಿದ್ದು ಸರಿಯಾದ ನಿರ್ವಹಣೆ ಇಲ್ಲದೆ, ಗಬ್ಬೆದ್ದು ನಾರುತ್ತಿರುತ್ತಿರುವುದನ್ನು ಅವಲೋಕನ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ವೈಫಲ್ಯ ಎದ್ದು ಕಾಣುತ್ತಿದೆ.
ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಗಬ್ಬು ವಾಸನೆ ಬರುತ್ತಿದೆ, ಹಲವು ಬಾರಿ ಈ ಬಗ್ಗೆ ಪಂಚಾಯತ್ ಗಮನಕ್ಕೆ ತಂದಿದ್ದೇನೆ ಕಾಯಿಲೆ ಹರಡುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ. ಆದರೂ
ಸರಿಯಾದ ನಿರ್ವಹಣೆ ಇಲ್ಲ.
ಇದರಿಂದಾಗಿ ಕಾಯಿಲೆಗಳು ಹರಡಿದರೆ ಗ್ರಾಮಪಂಚಾಯತ್ ಆಡಳಿತ ಮಂಡಳಿ ನೇರ ಹೊಣೆಯಾಗುತ್ತದೆ.
ಕಸ ಬರ್ನಿಂಗ್ ಮೆಷಿನ್ ಗೆ 32 ಲಕ್ಷ ಖರ್ಚು ಮಾಡಿ ಅಳವಡಿಸಲಾಗಿತ್ತು, ಮೂರು ವರ್ಷಗಳ ಹಿಂದೆಯೇ ಈ ಯಂತ್ರ ಕೆಟ್ಟು ಹೋಗಿದ್ದು,ಹಲವಾರು ಬಾರಿ ಮನವಿ ಮಾಡಿದರು ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡರು ಅಧಿಕಾರಿಗಳು, ಆಡಳಿತ ಮಂಡಳಿ ಈ ಬಗ್ಗೆ ಇಂದಿನ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಗ್ರಾಮಸ್ಥರ ತೆರಿಗೆ ಹಣ ಮೂವತ್ತೇರಡು ಲಕ್ಷ ಮಣ್ಣುಪಾಲಾಗಿದೆ ಎಂದರು.

ಸ್ವಯಂ ಪ್ರೇರಿತವಾಗಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡುವ ಕಾರ್ಯ ನಡೆದಿಲ್ಲ, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನಲ್ಲಿ ಈ ಬಗ್ಗೆ  ದಂಡ ವಿಧಿಸುವುದಾಗಲಿ ಯಾವುದೇ ಕಟ್ಟು ನಿಟ್ಟಿನ ಕ್ರಮಗಳಿಲ್ಲ, ಸುಬ್ರಹ್ಮಣ್ಯದ ವರ್ತಕರು ಅಂಗಡಿ ಮುಂಗಟು ಮಾಲೀಕರು ಸ್ವಯಂ ಪ್ರೇರಿತರಾಗಿ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು . ಎಲ್ಲರು ಸಹಕರಿಸಿದಲ್ಲಿ ಸುಬ್ರಹ್ಮಣ್ಯ ಗ್ರಾಮದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
ಸನ್ಮಾನ್ಯ ರಾಹುಲ್ ಗಾಂಧಿಯವರ ಜನ್ಮದಿನದ ಸವಿ ನೆನಪಿಗಾಗಿ ಸುಬ್ರಹ್ಮಣ್ಯ ಗ್ರಾಮವನ್ನು ತ್ಯಾಜ್ಯ ಮುಕ್ತ ಮಾಡುವ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ನಂತರ ಮಾತನಾಡಿದ ಮಾಜೀ ಗ್ರಾಮಪಂಚಾಯಿತಿ ಸದಸ್ಯ ಶಿವರಾಮ ರೈ
ಕಸ ವಿಲೇವಾರಿ ಘಟಕದ ಪಕ್ಕದಲ್ಲೇ ಇರುವ ಪಂಚಾಯತ್ ಭೂಮಿಯಲ್ಲಿ ರುದ್ರ ಭೂಮಿ ನಿರ್ಮಾಣ ಮಾಡಿದೆ ಇಲ್ಲಿ ಸರಿಯಾದ ನಿರ್ವಹಣೆ ಇಲ್ಲ ಕಸ, ಗಿಡಗಳು ಬೆಳೆದಿವೆ, ರುದ್ರ ಭೂಮಿಗೆ ಬಂದ ಹೆಣವು ವಾಪಾಸ್ ಹೋಗುವ ಪರಿಸ್ಥಿತಿ ಉಂಟು ಗಾರ್ಡನ್ ಇರಬೇಕಾದಲ್ಲಿ ಕಮಿನಿಸ್ಟ್ ಗಿಡಗಳು ಕಳೆ ತುಂಬಿಕೊಂಡಿದೆ, ದುಡ್ಡು ಕೊಟ್ಟು ತಂದು ಗಾರ್ಡನ್ ಅಲ್ಲಿ ನೆಟ್ಟ ಗಿಡಗಳ ನಿರ್ವಹಣೆ ಇಲ್ಲದಾಗಿದೆ.
ಸುಬ್ರಹ್ಮಣ್ಯ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂಬ ದೃಷ್ಟಿಯಲ್ಲಿ ನಾವೆಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರು  ಆಂದೋಲನವನ್ನು ಹಮ್ಮಿಕೊಂಡಿದ್ದೇವೆ.
ಕಸ ವಿಲೇವಾರಿ ಸರಿಯಾದ ನಿರ್ವಹಣೆ ಮಾಡಿದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟಿನ ಹೋರಾಟ ಮಾಡುವುದು ಅನಿವಾರ್ಯ ಪಂಚಾಯತ್ ಗೆ ಆಗದಿದ್ದರೆ ಬೇರೆ ಯಾರಿಗಾದರೂ ಬಿಟ್ಟು ಕೊಡಲಿ ಸಂಘ ಸಂಸ್ಥೆಗಳು ನಿರ್ವಹಣೆ ಮಾಡಲಿ ಈ ರೀತಿಯಾಗಿ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಬಾಲಕೃಷ್ಣ ಮರೀಲ್, ಕಾಂಗ್ರೆಸ್ ಪಕ್ಷ ಸದಸ್ಯರಾದ ಸುಬ್ರಹ್ಮಣ್ಯ ಭಟ್, ಲೋಲಾಕ್ಷ, ಸತೀಶ್ ಕೂಜುಗೋಡು, ಸುಬ್ರಹ್ಮಣ್ಯ ರಾವ್, ಕಿಶೋರ್ ಆರಂಪಾಡಿ, ಮಾದವ ದೇವರ ಗದ್ದೆ, ಪವನ್ ಎಮ್.ಡಿ ಮತ್ತಿತರರು ಉಪಸ್ಥಿತರಿದ್ದರು.