ಚೆಂಬು ಪ್ರೌಢಶಾಲಾ ಸಹಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಅವರಿಗೆ ಬೀಳ್ಕೊಡುಗೆ

0

ಚೆಂಬು ಪ್ರೌಢಶಾಲಾ ಸಹಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಪಿ.ಎಸ್. ಅವರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜೂ. 22ರಂದು ಜರುಗಿತು.

ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ನಂಬಿಯಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸುದೀರ್ಘ ಇಪ್ಪತ್ತೈದು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಕಳೆದ ಮೇ.31ರಂದು ನಿವೃತ್ತಿಗೊಂಡಿದ್ದ ಶ್ರೀಮತಿ ಕಾಮಾಕ್ಷಿ ಹಾಗೂ ಅವರ ಪತಿ ಮಡಿಕೇರಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ ದಂಪತಿಯನ್ನು ಕೊಡಗು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಹಾಗೂ ಮಡಿಕೇರಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರವಿಕೃಷ್ಣ ಅವರು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಶಾಲಾ ವತಿಯಿಂದ ಸನ್ಮಾನಿಸಿ, ಬೀಳ್ಕೊಟ್ಟರು.

ಶ್ರೀಮತಿ ಸಂಗೀತ ಅಮೃತ್ ಕುಮಾರ್, ಪೆರಾಜೆ ಶಾಲಾ ಸಹಶಿಕ್ಷಕಿ ಶ್ರೀಮತಿ ರೇಖಾ ಕೋಡಿ ಅವರು ಶ್ರೀಮತಿ ಕಾಮಾಕ್ಷಿ ಅವರ ಶಿಕ್ಷಕ ವೃತ್ತಿ ಜೀವನದ ಕುರಿತು ಮಾತನಾಡಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ, ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಜ್ಯೂನಿಯರ್ ಕಾಲೇಜು ಉಪನ್ಯಾಸಕ ಕುಮಾರ್, ಸ್ಥಳೀಯರಾದ ಗೋಪಾಲ ಹೊಸೂರು, ಚಂದ್ರಶೇಖರ ಹೊಸೂರು, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯಮುನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಶಿಕ್ಷಕ ರಂಜಿತ್ ಕಾರ್ಯಕ್ರಮ ನಿರೂಪಿಸಿದರು.