ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸಹಕಾರಿ ಸಂಘದಲ್ಲಿ ಅಡಿಕೆ ಎಲೆಚುಕ್ಕೆ ರೋಗಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅಡಿಕೆ ಎಲೆಚುಕ್ಕೆ ರೋಗಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರವು ಸಂಘದ ಸಿರಿ ಸಹಕಾರಿ ಸೌಧದಲ್ಲಿ ಫೆ.12 ರಂದು ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿದ್ದರು.


ಇಂದೋರ್ ಸಸ್ಯ ಪೋಷಕ ಸಂಸ್ಥೆಯ ಮುಖ್ಯ ಕಾರ್ಯಪಾಲನ ನಿರ್ದೇಶಕರಾದ ಪೆರುವೋಡಿ ನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಡಿಕೆಯ ವಿವಿಧ ತಳಿಗಳಿಗೆ ಬಾಧಿಸುವ ಹಳದಿ ಎಲೆರೋಗ, ಎಲೆಚುಕ್ಕಿ ರೋಗಗಳನ್ನು ನಿಯಂತ್ರಿಸಲು ಇರುವ ರೋಗನಾಶಕಗಳ ಕುರಿತು ಸಮಗ್ರ ಮಾಹಿತಿ ನೀಡಿದರು‌

ಈ ಸಂದರ್ಭದಲ್ಲಿ ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಪ್ರಗತಿಪರ ಕೃಷಿಕರಾದ ಪಿ.ಬಿ.ಪ್ರಭಾಕರ ರೈ, ಸಂಘದ ವಲಯ ಮೇಲ್ವಿಚಾರಕರಾದ ರತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರುಗಳಾದ ಯು.ವಿ ಭಾಸ್ಕರ ರಾವ್, ಗಂಗಾಧರ ಪಿ.ಎಸ್, ಸುರೇಶ್.ಎಂ.ಹೆಚ್, ಜಗದೀಶ ಕಕ್ಕೆಬೆಟ್ಟು, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಈಶ್ವರ್ ಆರ್.ಕಲ್ಚಾರ್, ಹರೀಶ್ ಎಂ.ಎಸ್., ಶ್ರೀಮತಿ ಶಾರದಾ ಡಿ. ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ಹಾಗೂ ಗ್ರಾಮದ ಕೃಷಿಕರು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಸಿಬ್ಬಂದಿಗಳಾದ ಶ್ರೀಮತಿ ರಮ್ಯ, ಗುರುವ ಸಹಕರಿಸಿದರು.

ಹರೀಶ್ ಆಚಾರ್ಯ ಪ್ರಾರ್ಥಿಸಿ,
ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ಸ್ವಾಗತಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ಹರಿಪ್ರಸಾದ್ ಪಾನತ್ತಿಲ ವಂದಿಸಿದರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.