ಬೆಳ್ಳಾರೆ ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

0

ಕುಡಿಯುವ ನೀರಿನ ಪೈಪ್ ಲೈನ್,ವಿದ್ಯುತ್,ಬೀದಿ ದೀಪದ ಬಗ್ಗೆ ಚರ್ಚೆ

ಬೆಳ್ಳಾರೆ ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತ ಎಲ್.ರೈ ಯವರ ಅಧ್ಯಕ್ಷತೆ ಯಲ್ಲಿ ಫೆ.13 ರಂದು ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು. ಪಿಡಿಒ ಪ್ರವೀಣ್ ಸಿ.ವಿ. ವರದಿ ಮಂಡಿಸಿದರು.

ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ,ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಮಣಿಕಂಠ ಎಸ್,ವಿಠಲದಾಸ್ ಎನ್.ಎಸ್.ಡಿ, ಚಂದ್ರಶೇಖರ ಪನ್ನೆ,ಅನಿಲ್ ರೈ ಪುಡ್ಲಜೆ, ಶ್ರೀಮತಿ ಜಯಶ್ರೀ,ಭವ್ಯ, ಮೋಹಿನಿ ಕೆ.ಟಿ, ಗೌರಿ ನೆಟ್ಟಾರು ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.