














ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಪೃಥ್ವಿ ಕುಮಾರ್ ಟಿ.ಯವರು ಬೆಂಗಳುರು ಆಯುಕ್ತರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಇಲ್ಲಿಗೆ ನಿಯೋಜನೆ ಮೇರೆಗೆ ತೆರಳಿದ್ದಾರೆ.
೨೦೧೪ರಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಬಂದಿದ್ದ ಇವರು ಹತ್ತೂವರೆ ವರ್ಷಗಳ ಕಾಲ ಸುಳ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಚಿತ್ರದುರ್ಗದವರು.










