







ಉಬರಡ್ಕ ಮಿತ್ತೂರು ಗ್ರಾಮದ ಕುಂಬೆತ್ತಿಬನ ನಿವಾಸಿ ದೀವಟಿಗೆ ದೇವಪ್ಪ ಗೌಡ ಎಂಬವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು
ನಿನ್ನೆ ಉಬರಡ್ಕ ಸಮೀಪದ ದೀವಟಿಗೆ ಎಂಬಲ್ಲಿ ಕುಟುಂಬದ ದೈವಗಳ ನೇಮ ಇದುದ್ದರಿಂದ ರಾತ್ರಿ ಅಲ್ಲೇ ಸಮೀಪದ ಮನೆಯಲ್ಲಿ ತಂಗಿದ್ದರು.
ಇಂದು ಮುಂಜಾನೆ ಹೃದಯಾಘಾತಗೊಂಡು ನಿಧನರಾದರೆಂದು ತಿಳಿದು ಬಂದಿದೆ.
ಹಲವಾರು ವರ್ಷಗಳಿಂದ ಮಿತ್ತೂರು ನಾಯರ್ ದೈವದ ದೀಟಿಗೆ ಪೂಜಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ದೀವಟಿಗೆ ಕುಟುಂಬದ ಹಿರಿಯರಾಗಿದ್ದರು.
ಮೃತರು ಪತ್ನಿ ಶಿವಮ್ಮ, ಪುತ್ರ ಉಮೇಶ, ಪುತ್ರಿಯರಾದ ನಯನ ಮತ್ತು ಅನಿತಾ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.










