ಷಣ್ಮುಖ ಸ್ವಾಮಿಗೆ ಉತ್ಸವ ಬಲಿ – ದರ್ಶನ ಬಲಿ – ಬಟ್ಟಲುಕಾಣಿಕೆ – ರಾಜಾಂಗಣ ಪ್ರಸಾದ
ಇಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ – ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜೋಡು ದೀಟಿಗೆ ನಾಟಕ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಸಂಭ್ರಮದಿಂದ ಜರುಗುತ್ತಿದ್ದು, ಫೆ.20ರಂದು ಬೆಳಿಗ್ಗೆ ಶ್ರೀ ಷಣ್ಮುಖ ಸ್ವಾಮಿಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.

ಇಂದು ರಾತ್ರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ರಾತ್ರಿಯ ಮಹಾಪೂಜೆ, ರಂಗಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗದ ಕಲಾವಿದರು ಅಭಿನಯಿಸುವ ತುಳು ಜನಪದ ನಾಟಕ ಜೋಡು ದೀಟಿಗೆ ಪ್ರದರ್ಶನಗೊಳ್ಳಲಿದೆ.















ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಸದಸ್ಯರಾದ ಪುರುಷೋತ್ತಮ ಗೌಡ ನಂಗಾರು, ಪ್ರಧಾನ ಅರ್ಚಕ ಶ್ರೀವರ ಪಾಂಗಣ್ಣಾಯ, ವಿನೋದ್ ಕುಮಾರ್ ಮಹಾಬಲಡ್ಕ, ಹೇಮಚಂದ್ರ ಕುತ್ಯಾಳ, ವಿಜಯಕುಮಾರ್ ನರಿಯೂರು, ಶ್ರೀಮತಿ ಸೌಮ್ಯಲಕ್ಷ್ಮಿ ಬೈತಡ್ಕ, ಶ್ರೀಮತಿ ಪವಿತ್ರಭಾರತಿ ಕೋನಡ್ಕಪದವು, ಶ್ರೀಮತಿ ಸುಮತಿ ಹುಲಿಮನೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಅಧ್ಯಕ್ಷ ಸುಧಾಕರ ಕಾಮತ್, ಸಂಯೋಜಕ ನ. ಸೀತಾರಾಮ ಜಾಲ್ಸೂರು, ಪ್ರಧಾನ ಕಾರ್ಯದರ್ಶಿಗಳಾದ ಶರತ್ ಅಡ್ಕಾರು, ಜಯರಾಮ ರೈ ಜಾಲ್ಸೂರು, ಕೋಶಾಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ಪ್ರಧಾನ ಕಾರ್ಯದರ್ಶಿಗಳಾದ ಆತ್ಮಾನಂದ ಗಬ್ಬಲಡ್ಕ, ಗೋಪಾಲ ವಿ. ಪದವು, ಹರೀಶ್ ಕುಕ್ಕುಡೇಲು, ಬಾಲಕೃಷ್ಣ ಮಣಿಯಾಣಿ ಮರಸಂಕ, ಕೋಶಾಧ್ಯಕ್ಷ ವಿಜಯಕುಮಾರ್ ಕೋಡ್ತಿಲು ವಿನೋಬನಗರ, ಶ್ರೀ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ನಂಗಾರು, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಅಡ್ಕಾರು – ಬೀರಮಂಗಲ, ನಿತಿನ್ ಅರ್ಭಡ್ಕ, ಕೋಶಾಧ್ಯಕ್ಷ ಮುರಳೀಧರ ಅಡ್ಕಾರು, ಕಛೇರಿ ವ್ಯವಸ್ಥಾಪಕ ಹರ್ಷಿತ್ ದೇರಾಜೆ – ಪೇರಾಲು, ಮಾಜಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಉತ್ಸವ ಸಮಿತಿ ಉಪಾಧ್ಯಕ್ಷರುಗಳು, ಉಪಸಮಿತಿಯ ಪದಾಧಿಕಾರಿಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.










