ಇಸ್ರಾ ಆಯಿಷಾಳಿಗೆ ಇಂಗ್ಲಿಷ್ ಒಲಿಂಪಿಯಾಡ್ ನಲ್ಲಿ 3ನೇ ರ್‍ಯಾಂಕ್

0

ಕ್ರೆಸ್ಟ್ ಒಲಿಂಪಿಯಾಡ್ ಗ್ರೂಪ್ ನಡೆಸಿದ ಈ ವರ್ಷದ ಇಂಗ್ಲಿಷ್ ಒಲಿಂಪಿಯಾಡ್ ನಲ್ಲಿ ಇಸ್ರಾ ಆಯಿಷಾ ಬಶೀರ್ ಅಂತಾರಾಷ್ಟ್ರೀಯ ಮಟ್ಟದ ಮೂರನೇ ರ್‍ಯಾಂಕ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ಇದಕ್ಕಾಗಿ ಕ್ರೆಸ್ಟ್ ಸಂಸ್ಥೆಯ ಸಾಧಕರ ಟ್ರೋಫಿ ಮತ್ತು ಸರ್ಟಿಫಿಕೇಟ್ ಗೆ ಅರ್ಹಳಾಗಿದ್ದಾಳೆ. ಇದೇ ಸಂಸ್ಥೆ ನಡೆಸಿದ ಗಣಿತ, ವಿಜ್ಞಾನ ಹಾಗು ಮಾನಸಿಕ ಸಾಮರ್ಥ್ಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿಯೂ ಉತ್ತಮ ರಾಂಕ್ ಪಡೆದು ಚಿನ್ನದ ಪದಕ ಹಾಗು ಸರ್ಟಿಫಿಕೇಟ್ ಗೆ ಅರ್ಹಳಾಗುವ ಮೂಲಕ ಎಲ್ಲಾ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾಳೆ.

ಇಸ್ರಾ ಬರೆದ ಚೊಚ್ಚಲ ಇಂಗ್ಲಿಷ್ ಕಥಾ ಸಂಕಲನ “ಟೇಲ್ ಒಫ್ ವಂಡರ್ ಏಂಡ್ ಮಿಸ್ಟರಿ” ಯನ್ನು ಬ್ರಿಕ್ ಬುಕ್ಸ್ ನ ಯುಎಇ ಎಡಿಷನ್ ಕಳೆದ ವಾರ ಪ್ರಕಟಿಸಿತ್ತು. ತನ್ನ ಏಳನೆಯ ವರ್ಷ ಪ್ರಾಯದಲ್ಲಿ ಕಥಾ ಸಂಕಲನ ಪ್ರಕಟದೊಂದಿಗೆ ಅತ್ಯಂತ ಕಿರಿಯ ಕಥೆ ಬರಹಗಾರರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದಾಳೆ. ಯುಎಇಯ ಶಾರ್ಜಾದಲ್ಲಿರುವ ಜೇಮ್ಸ್ ಮಿಲೇನಿಯಂ ಸ್ಕೂಲಿನ ಎರಡನೇ ತರಗತಿ ವಿದ್ಯಾರ್ಥಿನಿ. ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಮಹಮ್ಮದ್ ಬಶೀರ್ ಅರಂಬೂರು ಮತ್ತು ಹಸೀನಾ ದಂಪತಿಗಳ ಪುತ್ರಿ.