ಸಹಕರಿಸಿದ ದುಗ್ಗಲಡ್ಕ ದುಗ್ಗಲಾಯ ಯುವಸೇವಾ ಸಂಘದ ಸದಸ್ಯರು








ಸೋಣಂಗೇರಿ ಸಮೀಪದ ಮಿತ್ತಮಜಲು ಎಂಬಲ್ಲಿ ರಕ್ಷಿತಾರಣ್ಯಕ್ಕೆ ಬೆಂಕಿ ಬಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಶಮನ ಮಾಡಿದ ಘಟನೆ ಇದೀಗ ವರದಿಯಾಗಿದೆ.
ಮಿತ್ತಮಜಲು ಮುಖ್ಯ ರಸ್ತೆಯ ನರಸಿಂಗ ಪರವ ಮನೆಯ ಸಮೀಪ ಅರಣ್ಯಕ್ಕೆ ಬೆಂಕಿ ಆವರಿಸಿದನ್ನು ಕಂಡ ದುಗ್ಗಲಡ್ಕದ ದುಗ್ಗಲಾಯ ಯುವಸೇವಾ ಸಂಘ ದ ಸದಸ್ಯರಾದ ಶಿವಕುಮಾರ್ ಈಶ್ವರಡ್ಕ, ನಾರಾಯಣ ನಾಯ್ಕ್, ಗಿರೀಶ್ ಕೊಡೆಂಚಡ್ಕ ಮತ್ತು ಆನಂದ ಎಂಬವರು ಸುಳ್ಯ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು.ಅಗ್ನಿ ಶಾಮಕ ದಳ ಆಗಮಿಸಿತು.ಅಗ್ನಿಶಾಮಕ ದಳದೊಂದಿಗೆ ಯುವಕರು ಸೇರಿಕೊಂಡು ಬೆಂಕಿ ಶಮನ ಮಾಡಿದರು.










