ಅಜ್ಜಾವರ : ನಿವೃತ್ತ ಪಂಚಾಯತ್ ಕಾರ್ಯದರ್ಶಿಗೆ ಬೀಳ್ಕೊಡುಗೆ

0

ಗ್ರಾಮ ಪಂಚಾಯತ್ ಅಜ್ಜಾವರದಲ್ಲಿ ಮೂರು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಡಿಸೆಂಬರ್ 31,2024 ರಂದು ನಿವೃತ್ತಿ ಗೊಂಡಿರುವ ರಮೇಶ್ ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಬೀಳ್ಕೊಡುಗೆ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಪಿಡಿಓ ಹಾಗೂ ಸಿಬ್ಬಂದಿ ವರ್ಗ ದವರು ನೆರವೇರಿಸಿದರು.

ಸಮಾರಂಭದಲ್ಲಿ ಕಾರ್ಯದರ್ಶಿಯವರ ಬಗ್ಗೆ ಪಂಚಾಯತ್ ಸದಸ್ಯರಾದ ಶ್ರೀಮತಿ ಲೀಲಾ ಮನಮೋಹನ ಅನಿಸಿಕೆ ವ್ಯಕ್ತಪಡಿಸಿದರು.

ಬೀಳ್ಕೊಡುಗೆ ಸ್ವೀಕರಿಸಿದ ಕಾರ್ಯದರ್ಶಿಯವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ದೇವಕಿ ವಿಷ್ಣು ನಗರ, ಉಪಾಧ್ಯಕ್ಷರಾದ ಅಬ್ದುಲ್ಲ ಎ, ಪಂಚಾಯತ್ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪಿಡಿಓ, ಸಿಬ್ಬಂದಿವರ್ಗ, ಅಂಚೆ ಪಾಲಕರು, ಇಂಜಿನಿಯರ್ ಸುದನ್ವ ಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಪಿಡಿಓ ಜಯಮಾಲಾ ಎ. ಕೆ,ಧನ್ಯವಾದವನ್ನು ಗ್ರಂಥಾಲಯಮೇಲ್ವಿಚಾರಕಿ ಲಕ್ಷ್ಮಿ ಕೆ ನೆರವೇರಿಸಿದರು.