ಜಯನಗರ: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಕಾರು

0

ಮಗುವಿಗೆ ಗಾಯ, ಆಸ್ಪತ್ರೆಗೆ ದಾಖಲು

ಜಯನಗರ ಶಾಲೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ಕಾರೊಂದು ಮನೆಯ ಗೋಡೆಗೆ ಗುದ್ದಿದ್ದು ಮನೆಯ ಸಿಟಔಟ್ ನಲ್ಲಿ ಆಟವಾಡುತಿದ್ದ ಐದು ವರ್ಷದ ಹೆಣ್ಣು ಮಗುವಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಫೆ. 26 ರಂದು ಸಂಜೆ ನಡೆದಿದೆ.

ಜಯನಗರ ನಿವಾಸಿ ಮಹಮ್ಮದ್ ಮೊಟ್ಟೆತ್ತೋಡಿ ಎಂಬುವರ ಮನೆಯ ಸಿಟೌಟಿನ ಮೇಲೆ ಬಂದಿರುವ ಕಾರು ಮೆಟ್ಟಿಲು ಬಳಿ ಇರುವ ಗೋಡೆಯ ಮೂಲೆಯನ್ನು ಹೊಡೆದು ಪಕ್ಕದಲ್ಲಿರುವ ಮೇಲ್ಚಾವಣಿಯ ಸಪೋಟ್ ಕಂಬಕ್ಕೆ ಗುಂದ್ದಿದೆ.ಇದಕ್ಕೂ ಮುನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೂ ಡಿಕ್ಕಿ ಹೊಡೆದಿದ್ದು ಸ್ಕೂಟಿ ಕೂಡ ಜಖಂ ಗೊಂಡಿದೆ.

ಈ ವೇಳೆ ಮನೆಯ ಮೆಟ್ಟಿಲು ಬಳಿ ಮಗು ಆಟವಾಡುತ್ತಿದ್ದು ಘಟನೆಯಿಂದ ಮಗುವಿಗೆ ಗಾಯವಾಗಿದ್ದು ಕೂಡಲೆ ಸ್ಥಳೀಯರು ಹಾಗೂ ಮನೆಯವರು ಮಗುವನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರ. ಮಗುವಿನ ಕೈಗೆ ಗಾಯವಾಗಿದೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾಗಿದೆ.

ಸ್ಥಳೀಯ ನಿವಾಸಿ ಸಾಜಿ ಎಂಬುವವರ ಮಾರುತಿ ಕಾರು ಇದಾಗಿದ್ದು ಇವರ ಪರಿಚಯದ ಜಯನಗರದ ಯುವಕ ಅಝರ್ ಎಂಬಾತ ಕಾರಿನ ಟ್ರಯಲ್ ನೋಡಲು ಕಾರನ್ನು ಚಲಾಯಿಸಿದ್ದು ಈ ವೇಳೆ ಆತನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ಅಲ್ಪಸಮಯ ಮೊದಲು ಇದೇ ಸ್ಥಳದಲ್ಲಿ ಇನ್ನೂ ಮೂರು, ನಾಲ್ಕು ಮಂದಿ ಮಕ್ಕಳು ಆಟವಾಡುತ್ತಿದ್ದರು ಎನ್ನಲಾಗಿದೆ.