ಬಾಳಿಲ ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮಸಭೆ

0

ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿ ಅವ್ಯವಸ್ಥೆ- ತೀವ್ರ ಚರ್ಚೆ

ಬಾಳಿಲ ಗ್ರಾಮ ಪಂಚಾಯತ್ ನ 2024 – 25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ರವರ ಅಧ್ಯಕ್ಷತೆಯಲ್ಲಿ ಮಾ.03 ರಂದು ಪಂಚಾಯತ್ ಆವರಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಪಿ.ಎಂ.ಪೋಷನ್ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಂ.ಟಿ.ನೋಡೆಲ್ ಅಧಿಕಾರಿಯಾಗಿದ್ದರು.


ಪಿಡಿಒ ಹೂವಪ್ಪ ಗೌಡರವರು ಸ್ವಾಗತಿಸಿದರು.
ಕಮಲರವರು ಪ್ರಾರ್ಥಿಸಿದರು.
ಕಾರ್ಯದರ್ಶಿ ಜಯಶೀಲ ರೈ ವರದಿ ಮಂಡಿಸಿದರು.
ಬಾಳಿಲ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಸರಿಯಾಗಿ ನಡೆದಿಲ್ಲ.
ಅವ್ಯವಸ್ಥೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.


ಈ ಬಗ್ಗೆ ಕೆಲಹೊತ್ತು ತೀವ್ರ ಚರ್ಚೆಗಳು ನಡೆದವು.
ಅಯ್ಯನಕಟ್ಟೆ ಅಂಗನವಾಡಿ ಸಹಾಯಕಿ ಹುದ್ದೆ ,ರಸ್ತೆ,ವಿದ್ಯುತ್ ಹಾಗು ಇತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ವೇದಿಕೆಯಲ್ಲಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ, ಸದಸ್ಯರಾದ ತಾರಾನಾಥ ಕಾಂಚೋಡು,ಶ್ರೀಮತಿ ತ್ರಿವೇಣಿ ಕೆ.ವಿ.ಬಾಳಿಲ, ಶ್ರೀಮತಿ ಸರಸ್ವತಿ ಬಾಳಿಲ,ಆನಂದ ಪಂಜಿಗಾರು,ರವೀಂದ್ರ ರೈ ಟಪ್ಪಾಲುಕಟ್ಟೆ, ಶ್ರೀಮತಿ ಸುಶೀಲ ಕಾಪಡ್ಕ,ಶ್ರೀಮತಿ ಸವಿತಾ ಚಾಕೋಟೆ,ಹರ್ಷ ಜೋಗಿಬೆಟ್ಟು ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.