ಏನೆಕಲ್ಲು: ಶಂಖಶ್ರೀ ಟ್ರೋಫಿ

0

ಟೀಮ್ ಯುನೈಟೆಡ್ ಎಡಮಂಗಲ ಪ್ರಥಮ, ಪ್ರೈಮ್ ಕುಕ್ಕೆ ದ್ವಿತೀಯ ಬಹುಮಾನ

ರೈತ ಯುವಕ ಮಂಡಲ ಏನೆಕಲ್ಲು ಇದರ ಸಹಯೋಗದಲ್ಲಿ ಪರಮಲೆ ಸಹೋದರರು ನೇತೃತ್ವದಲ್ಲಿ “ಶಂಖಶ್ರೀ ಟ್ರೋಫಿ” ಕಬಡ್ಡಿ ಪಂದ್ಯಾಟ ಮಾ. 9ರಂದು ಅರ್ಪಣಾ ಕ್ರೀಡಾಂಗಣ ಏನೆಕಲ್ಲು ಇಲ್ಲಿ ನಡೆಯಿತು.

ಪ್ರಥಮ ಬಹುಮಾನವನ್ನು ಟೀಮ್ ಯುನೈಟೆಡ್ ಎಡಮಂಗಲ ಪಡೆದರೆ, ಪೈಮ್ ಕುಕ್ಕೆ ದ್ವಿತೀಯ ಸ್ಥಾನ ಪಡೆಯಿತು. ಶ್ರೀ ವಿಷ್ಣು ವೈಭವ ತೃತೀಯ ಸ್ಥಾನ ಪಡೆದು ಸಪ್ತಶ್ರೀ ಗುತ್ತಿಗಾರು ಚತುರ್ಥ ಸ್ಥಾನ ಪಡೆಯಿತು.

ಕ್ರೀಡಾಂಗಣವನ್ನು ಪ್ರಗತಿಪರ ಕೃಷಿಕ ಶಿವರಾಮ ಗೌಡ ಪರಮಲೆ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ನಿವೃತ್ತ ಸುಬೇದಾರ್ ಭಾರತೀಯ ಸೇನೆಯ ಹೊನ್ನಪ್ಪ ಗೌಡ ಕಟ್ಟ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ರೈತ ಯುವಕ ಮಂಡಲ ಏನೆಕಲ್ಲು ಇದರ ಅಧ್ಯಕ್ಷ ಮನುದೇವ ಪರಮಲೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ, ದ.ಕ ಜಿಲ್ಲಾ ಕಬಡ್ಡಿ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲು, ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭರತ್ ನೆಕ್ರಾಜೆ, ತನು ಎಲೆಕ್ಟ್ರಾನಿಕ್ ಅಂಡ್ ಫರ್ನಿಚರ್ ಕಡಬ ಇದರ ಮಾಲಕ ಮಂಜುನಾಥ ಕೋಲಂತ್ತಾಡಿ, ಕಬ್ಬಡಿ ಅಸೊಶಿಯೇಷನ್ ಕಡಬ ತಾಲ್ಲೂಕು ಅಧ್ಯಕ್ಷ ಯಾಕೂಬ್, ರೈತ ಯುವಕ ಮಂಡಲ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲ ಉಪಸ್ಥಿತರಿದ್ದರು .ಸಭಾ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯ ರಮೇಶ, ಅಮೃತ ಕ್ಲಿನಿಕ್ ನ ಮುರಳಿ ಎ , ಮೆಸ್ಕಾಂನ ಪವರ್ ಮ್ಯಾನ್ ಉಮೇಶ್ ಹಂಜಗಿ ಇವರುಗಳನ್ನು ಸನ್ಮಾನಿಸಲಾಯಿತು.


ಪಂದ್ಯಾಟದ ಆಯೋಜಕಾರಾದ ಜೀವಿತ್ ಪರಮಲೆ ಸ್ವಾಗತಿಸಿದರು. ಪ್ರವೀಣ್ ಪರಮಲೆ ವಂದಿಸಿದರು
ಮೋಹಿತ್ ಜೇನುಕೋಡಿ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿತರಣಾ ಸಮಾರಂಭದ ವೇದಿಕೆಯಲ್ಲಿ ಮನುದೇವ್ ಪರಮಲೆ, ಜೀವಿತ್ ಪರಮಲೆ, ಕಿಶೋರ್ ಕುಮಾರ್ ಪರಮಲೆ, ಪದ್ಮನಾಭ ಪರಮಲೆ, ಸಾತ್ವಿಕ್ ಚಿದ್ಗಲ್, ಶರತ್ ಮಾದನಮನೆ, ಸುಧೀರ್ ತೋಟ ಉಪಸ್ಥಿತರಿದ್ದು, ರುಧ್ವಿ ಪರಮಲೆ ಬಹುಮಾನ ವಿತರಿಸಿದರು.