ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಆನಂದ್ ಮಹೀಂದ್ರ
ಭಾರತದ ಬಿಲಿಯನೇರ್ ಉದ್ಯಮಿ, ಮಹೀಂದ್ರ & ಮಹೀಂದ್ರ ಉದ್ಯಮ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ತನ್ನ ಎಕ್ಸ್ ಖಾತೆಯಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ , ಸುಳ್ಯದ ಆರ್. ಕೆ.ನಾಯರ್ ಅವರ ಕುರಿತಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.










” ಮಿಯಾವಾಕಿ ಅರಣ್ಯ ಎಂದರೇನು ಎಂದು ನನಗೆ ತಿಳಿದಿತ್ತು, ಆದರೆ ಡಾ. ನಾಯರ್ ಅವರ ಬಗ್ಗೆ ಮತ್ತು ಅವರು ಭಾರತದಲ್ಲಿ ವಿಶ್ವದ ಅತಿದೊಡ್ಡ ಅರಣ್ಯವನ್ನು ಹೇಗೆ ರಚಿಸಿದರು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಅಮೆರಿಕವು ಸುಸ್ಥಿರತೆಯನ್ನು ತನ್ನ ಆದ್ಯತೆಯ ಪಟ್ಟಿಯಿಂದ ತೆಗೆದುಹಾಕಿರುವ ಸಮಯದಲ್ಲಿ, ನಮ್ಮ ನಡುವೆ ಅಂತಹ ವೀರರಿದ್ದಾರೆ ಎಂದು ನಾನು ಕೃತಜ್ಞನಾಗಿದ್ದೇನೆ.” ಎಂಬರ್ಥದಲ್ಲಿ ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ.










