ಪಂಜ: ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ -ಆಮಂತ್ರಣ ಪತ್ರಿಕೆ ಬಿಡುಗಡೆ

0

ಮೇ 08,09, ಬ್ರಹ್ಮಕಲಶೋತ್ಸವ- ಮೇ11,12 ನೇಮೋತ್ಸವ

ಮೂರು ಊರಿನ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಕಂರ್ಬು ಪೂಜಾರಿಮನೆ ಐವತ್ತೊಕ್ಲು (ಕಂರ್ಬು, ಅಳ್ಪೆ,ಕಂಡೂರು ಕೂಡು ಕಟ್ಟು ) ಐವತ್ತೊಕ್ಲು ಗ್ರಾಮ ಪಂಜ
ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಇದೇ ಮೇ 08,09 ಮತ್ತು ಮೇ11,12 ನಡೆಯಲ್ಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಎ .13 ರಂದು ದೈವಸ್ಥಾನ ವಠಾರದಲ್ಲಿ ನಡೆಯಿತು.ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯರಾಮ್ ಕಂಬಳ, ಆಡಳಿತ ಸಮಿತಿ ಅಧ್ಯಕ್ಷ ರಾಘವ ಕಾಣಿಕೆ ಮತ್ತು ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಲಕ್ಷ್ಮಣಗೌಡ ಬೊಳ್ಳಾಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಖಜಾಂಜಿ ಭವಾನಿ ಶಂಕರ ಪಾಲೋಳಿ , ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶಿವರಾಮ ಕಂರ್ಬು ಪೂಜಾರಿಮನೆ, ಸಮಿತಿ ಸಂಚಾಲಕರಾದ ರವಿಕುಮಾರ್ ಚಳ್ಳಕೋಡಿ, ಚಿದಾನಂದ ದೊಡ್ಡಮನೆ, ಸಮಿತಿ ಸದಸ್ಯರಾದ ಚೆನ್ನಕೇಶವ ಪೂಜಾರಿಮನೆ, ಪ್ರಕಾಶ್ ಪೂಜಾರಿಮನೆ, ಚೇತನ್ ದೊಡ್ಡಮನೆ, ಕೀರ್ತನ್ ಚಳ್ಳಕೋಡಿ ಮತ್ತು ಇತರರು ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ಸ್ವಾಗತಿಸಿ ವಂದಿಸಿದರು.