ಬೆಳ್ಳಾರೆ :ವಸಂತ ವೇದ ಶಿಬಿರ ಉದ್ಘಾಟನಾ ಸಮಾರಂಭ

0

ಶ್ರೀ ಸದಾಶಿವ ವೇದ ಪಾಠಶಾಲೆ, ಬೆಳ್ಳಾರೆ ಇದರ ಆಶ್ರಯದಲ್ಲಿ ವಸಂತ ವೇದ ಶಿಬಿರ ಮೇ. 17ರ ತನಕ ನಡೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಏ.16 ರಂದು ನಡೆಯಿತು.

ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ಸ್, ಫೌಂಡೇಷನ್ ಇದರ ತರ್ಕ ಮತ್ತು ಅದ್ವೈತ ವೇದಾಂತ ವಿಭಾಗದ ಪ್ರಾದ್ಯಾಪಕ ಸತ್ಯನಾರಾಯಣ ಚಣಿಲ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರೊಂದಿಗೆಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕಾರ್ಯವನ್ನು ನಾವೆಲ್ಲರೂ ಪರಿಪಾಲಿಸಿ ಮಕ್ಕಳನ್ನು ಸಮಾಜದ ಸತ್ಪ್ರಜೆಗಳನ್ನಾಗಿಸಿಸೋಣ ಎಂದರು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ವಲಯ ಪರಿಷತ್ ನ ಅಧ್ಯಕ್ಷರಾದ ಮಾಧವಭಟ್ ಶೃಂಗೇರಿ ಹಾಗೂ ಗೌರವ ಉಪಸ್ಥಿತರಿದ್ದ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಿ.ಯಸ್. ಚಿದಾನಂದ ರಾವ್ ಶುಭ ಹಾರೈಸಿದರು. ಶ್ರೀ ಸದಾಶಿವ ವೇದ ಪಾಠಶಾಲೆಯ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ‘ವೇದ ವಸಂತ ‘ ಮತ್ತು ‘ ವೇದ ಮಾಧವ ‘ ಮಂತ್ರ ಪುಸ್ತಕವನ್ನು ಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ಕೊಡುಗೆ ನೀಡಿದರು.
ಶಿಬಿರದ ಅದ್ಯಾಪಕ ವೇl ಮೂl ವೇಣುಗೋಪಾಲ್ ಭಟ್ ಪ್ರಾರ್ಥಿಸಿದರು. ಶಿಬಿರದ ಸಂಚಾಲಕ ಶ್ಯಾಮ್ ಪ್ರಕಾಶ್ ಕುರುoಬುಡೇಲು ವಿದ್ಯಾರ್ಥಿಗಳಿಗೆ ಸಮವಸ್ತ್ರ ವೈಯಕ್ತಿಕ ನೆಲೆಯಲ್ಲಿ ವಿತರಿಸಿ, ಮುಂದಿನ ಒಂದು ತಿಂಗಳ ಕಾಲ ನಡೆಯುವ ಶಿಬಿರಕ್ಕೆ ಸರ್ವರ ಸಹಕಾರ ಕೋರಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀರಾಮ ಪಾಟಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.