








ತೀರಾ ಬಡತನದಲ್ಲಿದ್ದು, ದಾನಿಗಳ ನೆರವಿನಿಂದ ಮನೆ ನಿರ್ಮಾಣವಾಗುತ್ತಿರುವ ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ಶ್ರೀಮತಿ ಸೀತಮ್ಮರಿಗೆ ರೈಟ್ ಟು ಲಿವ್ ಕೋಟೆ ಫೌಂಡೇಷನ್ ವತಿಯಿಂದ ರೂ. 25 ಸಾವಿರ ಧನಸಹಾಯ ನೀಡಿದರು.
ಧನಸಹಾಯದ ಚೆಕ್ಕನ್ನು ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಏ. 18ರಂದು ಶ್ರೀಮತಿ ಸೀತಮ್ಮರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸೀತಮ್ಮರ ಪುತ್ರಿಯರಾದ ಕು. ಚಿತ್ರಾವತಿ, ಕು. ಹರಿಣಿ ಮತ್ತು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು ಉಪಸ್ಥಿತರಿದ್ದರು.










