ಯೇನೆಕಲ್ಲು ಸರಕಾರಿ ಪ್ರೌಢಶಾಲಾ ಮೇಲ್ಛಾವಣಿ ಶಿಥಿಲ- ತ್ರಿಶಂಕು ಸ್ಥಿತಿಯಲ್ಲಿ ವಿದ್ಯಾರ್ಥಿಗಳು

0

ಯೇನೆಕಲ್ಲು ಸರಕಾರಿ ಪ್ರೌಢಶಾಲೆಯ ಮೇಲ್ಛಾವಣಿಯ ಶಿಥಿಲಗೊಂಡು ಮುಂದಿನ ಮಳೆಗಾಲದಲ್ಲಿ ತರಗತಿ ನಡೆಸಲು ಅಸಾಧ್ಯವಾದ ಸನ್ನಿವೇಶ ನಿರ್ಮಾಣವಾಗಿರುವುದಾಗಿ ತಿಳಿದುಬಂದಿದೆ.


ಶಾಲೆಯ 4 ಕೊಠಡಿಗಳು, ಒಂದು ಸಭಾಂಗಣದ ಮಾಡಿನ ಹಲವು ಪಕ್ಕಾಸು ಮತ್ತು ರೀಪುಗಳು ಗೆದ್ದಲು ಹಿಡಿದು ತುಂಡಾಗಿದ್ದು, ಹಗ್ಗದ ಮೂಲಕ ಕಟ್ಟಲಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲವೆನ್ನಲಾಗಿದೆ.

ನಾವು ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಇಲಾಖೆಗೆ ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಮುಂದಿನ ಮಳೆಗಾಲದಲ್ಲಿ ತರಗತಿ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಸೂಕ್ತ ಅನುದಾನವನ್ನು ಒದಗಿಸಿ ಸಂಭವನೀಯ ಅಪಾಯದಿಂದ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಪಾರು ಮಾಡಬೇಕೆಂದು ವಿನಂತಿಸುತಿದ್ದೇನೆ – ಲಕ್ಷಣ ಸಂಕಡ್ಕ ಅಧ್ಯಕ್ಷ ಎಸ್.ಡಿ.ಎಂ.ಸಿ.