ಪೆರುವಾಜೆಯ ಬಡ ಮಹಿಳೆಯ ಮನೆ ನಿರ್ಮಾಣಕ್ಕೆ ಧನ ಸಹಾಯಕ್ಕಾಗಿ ಮನವಿ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾ ನಗರದ ಶ್ರೀಮತಿ ಲಕ್ಷ್ಮೀ ಬಾಬು ಇವರಿಗೆ ಸರ್ಕಾರದಿಂದ ದೊರಕಿದ ಮನೆ ಪೂರ್ಣ ಗೊಳಿಸಲು 4 ವರುಷಗಳಿಂದ ಹಣ ಸಾಲದೇ ಸಮಸ್ಯೆಯಲ್ಲಿ ಇದ್ದಾರೆ.


ಇದನ್ನು ಕಂಡ ಈ ವಾರ್ಡ್ ನ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ಇವರ ಖಾತೆಗೆ ಗೃಹ ಲಕ್ಷ್ಮಿ ಮತ್ತು ಇತರ ಸಹಾಯಧನ ಹಣ ಇವರ ಖಾತೆಗೆ ಜಮಾ ಆದ ಹಣ ಯಾರದ್ದೊ ಸಾಲಕ್ಕೆ ಜಾಮೀನು ನೀಡಿರುವುದರಿಂದ ಬ್ಯಾಂಕ್ ನವರು ಇವರಿಗೆ ಹಣ ನೀಡದೇ ಸತಾಯಿಸಿರುವುದರ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅವರಲ್ಲಿ ಮಾತನಾಡಿ ರೂ 37 ಸಾವಿರ ಇವರಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಹಣದಿಂದ ಬಾಕಿ ಉಳಿದ ಮನೆ ಕೆಲಸ ಪೂರ್ಣಗೊಳಿಸಿ ಕೊಡುವಂತೆ ಶ್ರೀಮತಿ ಲಕ್ಷ್ಮೀ ಬಾಬು ವಿನಂತಿ ಮಾಡಿದಂತೆ ಇದೀಗ ಈ ಮನೆ ಕೆಲಸ ಕಾರ್ಯವನ್ನು ಮಾಜಿ ಪಂಚಾಯತಿ ಸದಸ್ಯ ರಾದ ಇಬ್ರಾಹಿಂ ಅಂಬಟೆ ಗದ್ದೆ ಅವರಿಗೆ ಉಸ್ತುವಾರಿ ನೀಡಿ ಎಪ್ರಿಲ್ 20 ರಂದು ಮನೆ ಕೆಲಸ ಪ್ರಾರಂಭಗೊಳ್ಳಲಿದೆ. ಇದಕ್ಕೆ ಅಂದಾಜು ರೂ 75 ಸಾವಿರ ವೆಚ್ಚ ತಗುಲಲಿದೆ. ಇದಕ್ಕೆ ದಾನಿಗಳ ಸಹಕಾರದಿಂದ ಮನೆ ಪೂರ್ಣ ಗೊಳಿಸುವ ಕಾರ್ಯಕ್ಕೆ ಸಚಿನ್ ರಾಜ್ ಶೆಟ್ಟಿ ಅವರು ಕಾರ್ಯಪ್ರವೃತ್ತರಾಗಿದ್ದು
ಶ್ರೀಮತಿ ಲಕ್ಷ್ಮೀ ಬಾಬು ಇವರ ಬ್ಯಾಂಕ್: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬೆಳ್ಳಾರೆ
ಖಾತೆ ನಂ89047548848
IFSC code no KVGB0005501 ಇವರ ಖಾತೆಗೆ ಸಹಾಯ ಮಾಡಲು ಸಚಿನ್ ವಿನಂತಿಸಿದ್ದಾರೆ.