ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಯಕ್ಷೋತ್ಸವ

0

ಡಾ.ಆರ್. ಕೆ. ನಾಯರ್, ಟಿ. ಪದ್ಮನಾಭ ಭಟ್ಟರಿಗೆ ಸನ್ಮಾನ

ಸುಳ್ಯದ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ 2024 – 25 ನೇ ಸಾಲಿನ ನಾಟ್ಯ ತರಬೇತಿ ವಿದ್ಯಾರ್ಥಿಗಳ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ 43 ನೇ ವರ್ಷದ ಯಕ್ಷೋತ್ಸವವು ಎ.19 ರಂದು ಶ್ರೀ ಚೆನ್ನಕೇಶವ ದೇಗುಲದ ವಠಾರದಲ್ಲಿ ನಡೆಯಿತು.

ಸುಳ್ಯ ಅಕಾಡೆಮಿ‌ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದರವರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸರಾದ ಡಾ. ಪ್ರಭಾಕರ ಶಿಶಿಲ ಅವರು ಸಮಾರೋಪ ಭಾಷಣಗೈದರು.

ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್. ಕೆ. ನಾಯರ್ ಹಾಗೂ ಹವ್ಯಾಸಿ ಭಾಗವತ ಟಿ. ಪದ್ಮನಾಭ ಭಟ್ ಅವರಿಗೆ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು ಅಭಿನಂದನಾ ಭಾಷಣ ಮಾಡಿದರು.

” ಕೋಡ್ಳ ಗಣಪತಿಯವರು ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಮಾಡುತ್ತಿರುವ ಸೇವೆ ಅದ್ವಿತೀಯವಾದದ್ದು. ಸಮಾಜ ಇಂಥ ಯಕ್ಷಗುರುಗಳನ್ನು ಗೌರವಿಸಿ ಅಭಿನಂದಿಸುವ ಕಾರ್ಯ ಮಾಡಬೇಕು ” ಅತಿಥಿಗಳು ಅಭಿಪ್ರಾಯಪಟ್ಟರು.

ಕು. ಹೇಮಸ್ವಾತಿ ಕುರಿಯಾಜೆ ಪ್ರಾರ್ಥಿಸಿದರು. ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಸಂಸ್ಥಾಪಕ, ಯಕ್ಷ ಗುರು ಕೋಡ್ಳ ಗಣಪತಿ ಭಟ್ ಸ್ವಾಗತಿಸಿದರು. ವಿಕೇಶ್ ರೈ ಶೇಣಿ ವಂದಿಸಿದರು.‌ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.‌

ಯಕ್ಷೋತ್ಸವದ ಅಂಗವಾಗಿ ಭುವನೇಶ್ವರಿ ಕಲಾಮಂಡಳಿಯ ಕಲಿಕಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಮದನಾಕ್ಷಿ ತಾರಾವಳಿ, ರಾಣಿ ಚಿತ್ರಾಂಗದೆ ಹಾಗೂ ತ್ರಿಪುರ ಮಥನ ಯಕ್ಷಗಾನ ಪ್ರದರ್ಶನಗೊಂಡಿತು.