ಮೇ.2,3 : ಚೆಮ್ನೂರು ತರವಾಡು ಮನೆಯಲ್ಲಿ ನಾಗ ಚಾಮುಂಡಿ ಮತ್ತು ಪುರುಷರಾಯ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ

0

ಮೇ.6,7 : ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ

ಐವರ್ನಾಡು ಗ್ರಾಮದ ಚೆಮ್ನೂರು ತರವಾಡು ಮನೆಯಲ್ಲಿ ನಾಗಚಾಮುಂಡಿ ಮತ್ತು ಪುರುಷರಾಯ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮೇ.2 ಮತ್ತು ಮೇ.03 ರಂದು ಹಾಗೂ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವವು ಮೇ.06 ಮತ್ತು ಮೇ.07 ರಂದು ನಡೆಯಲಿದೆ.
ಎ.26 ರಂದು ಗೊನೆ ಕಡಿಯಲಾಯಿತು.


ಮೇ.2 ರಂದು ಅಪರಾಹ್ನ ಗಂಟೆ 3.00 ಕ್ಕೆ ತಂತ್ರಿಗಳ ಆಗಮನ,ಸಂಜೆ ಗಂಟೆ 7.00 ರಿಂದ ಪುಣ್ಯಾಹವಾಚನ,ಸ್ಥಳಶುದ್ಧಿ,ಪ್ರಸಾದ ಶುದ್ಧಿ,ರಾಕ್ಷೋಘ್ನ ಹೋಮ,ವಾಸ್ತುಹೋಮ,ವಾಸ್ತುಬಲಿ,ವಾಸ್ತು ಪುಣ್ಯಾಹಾಂತ ನಡೆಯಲಿದೆ.
ಮೇ.03 ರಂದು ಪೂರ್ವಾಹ್ನ ಗಂಟೆ 6.00 ಕ್ಕೆ ಗಣಪತಿ ಹೋಮ,ಬ್ರಹ್ಮಕಲಶ ಪೂಜೆ ನಡೆಯಲಿದೆ.


ಪೂರ್ವಾಹ್ನ ಗಂಟೆ 8.15 ರಿಂದ 8.56 ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ,ಮಹಾಪೂಜೆ ,ನಿತ್ಯನೈಮಿತ್ಯಾದಿಗಳ ನಿರ್ಣಯ,ಮಧ್ಯಾಹ್ನ ಗಂಟೆ 12.00 ಕ್ಕೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಮೇ.06 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಗಣಹೋಮ,ಗಂಟೆ 9.00 ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ,ನಾಗತಂಬಿಲ ನಡೆಯಲಿದೆ.
ಬೆಳಿಗ್ಗೆ ಗಂಟೆ 11.30 ಕ್ಕೆ ಶ್ರೀ ವೆಂಕಟರಮಣ ದೇವರ ಹರಿಸೇವೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 6.00 ಕ್ಕೆ ಶ್ರೀ ದೈವಗಳ ಭಂಡಾರ ಹಿಡಿಯುವುದು,ಪಾಷಾಷ ಮೂರ್ತಿ ,ಕೊರತ್ತಿ ದೈವಗಳ ನೇಮ ನಡಾವಳಿ ನಡೆಯಲಿದೆ.
ಮೇ.07 ರಂದು ಬೆಳಿಗ್ಗೆ ಗಂಟೆ 1.00 ರಿಂದ ರಕ್ತೇಶ್ವರಿ ,ನಾಗಚಾಮುಂಡಿ,ಪುರುಷರಾಯ,ಪಂಜುರ್ಲಿ ದೈವಗಳ ನೇಮ ನಡಾವಳಿ ನಡೆಯಲಿದೆ.
ಬೆಳಿಗ್ಗೆ ಗಂಟೆ 5.00 ರಿಂದ ರುದ್ರಚಾಮುಂಡಿ ಮತ್ತು ಶೀರಾಡಿ ದೈವಗಳ ನೇಮ ನಡಾವಳಿ ನಡೆಯಲಿದೆ.
ಬೆಳಿಗ್ಗೆ ಗಂಟೆ 7.00 ಕ್ಕೆ ಮಾರಿಕಳಕ್ಕೆ ಹೋಗುವುದು.


ಮಧ್ಯಾಹ್ನ ಗಂಟೆ 12.00 ಕ್ಕೆ ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನದ ನಂತರ ಗುಳಿಗ ವಗೈರೆ ದೈವಗಳಿಗೆ ನೇಮ ನಡಾವಳಿ ನಡೆಯಲಿದೆ.