ಇಂದು (ಎ.26) ರಾತ್ರಿ ಪಾಷಾಣಮೂರ್ತಿ, ಗುಳಿಗ ದೈವದ ನೇಮ
ನಾಳೆ (ಎ.27) ಬೆಳಗ್ಗೆ ಕೊರಗಜ್ಜ ದೈವದ ನೇಮೋತ್ಸವ
ಸುಳ್ಯ ಕುರುಂಜಿಭಾಗ್‌ನಲ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಎ.೨೫ರಂದು ದೈವಗಳ ಪ್ರತಿಷ್ಠೆ ನಡೆಯಿತು.









ಎ.೨೬ ಮತ್ತು ೨೭ರಂದು ನೇಮೋತ್ಸವ ನಡೆಯಲಿದೆ. ಎ.೨೬ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯಲಾಗುವುದು. ರಾತ್ರಿ ಶ್ರೀ ಪಾಷಾಣಮೂರ್ತಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವ. ರಾತ್ರಿ ೧೦ ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ. ಎ.೨೭ರಂದು ಬೆಳಗ್ಗೆ ಗಂಟೆ ೮ ರಿಂದ ಶ್ರೀ ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯುವುದು ನಡೆಯುವುದು ಎಂದು ದೈವಸ್ಥಾನದ ಪೂಜಾರಿ ಶಿವಾನಂದ ಪೂಜಾರಿ ಕುರುಂಜಿಭಾಗ್ ತಿಳಿಸಿದ್ದಾರೆ.
ಕುರುಂಜಿಭಾಗನಲ್ಲಿರುವ ಕೊರಗಜ್ಜ ದೈವಸ್ಥಾನಕ್ಕೆ ಸುಮಾರು ರೂ.೧೫ ಲಕ್ಷ ವೆಚ್ಚದಲ್ಲಿ ನೂತನ ಗುಡಿ ನಿರ್ಮಾಣ ಮಾಡಲಾಗಿದೆ.










