ಸುಳ್ಯದಲ್ಲಿ ಟೊಯೊಟಾ ಗ್ರಾಮೀಣ ಶೋರೂಮ್ ಶುಭಾರಂಭ

0

ಗ್ರಾಮೀಣ ಜನತೆ ಸುಲಭದಲ್ಲಿ ಸೇವೆ ಸಿಗುವಂತೆ ಮಾಡುವುದೇ ಯುನೈಟೆಡ್ ಟೊಯೋಟಾದ ಗುರಿ: ರಾಮ್ ಗೋಪಾಲ್ ರಾವ್

ಸುಳ್ಯ ಒಡಬಾಯಿ ಬಳಿ ಯುನೈಟೆಡ್ ಟೊಯೋಟಾ ಗ್ರಾಮಿಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು.


ನೂತನ ಗ್ರಾಮೀಣ ಶೋರೂಂ ನ್ನು ಪದ್ಮಶ್ರೀ ಪುರಸ್ಕೃತರು ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಗಿರೀಶ್ ಭಾರದ್ವಾಜ್ ಉದ್ಘಾಟಿಸಿ ಸುಳ್ಯದ ಜನತೆ ಸುಳ್ಯದಲ್ಲಿ ಟೊಯೋಟಾ ಸೇವೆ ಅರಂಭಿಸಿದ್ದು ತುಂಬಾ ಶ್ಲಾಘನೀಯ ಇದರ ಗ್ರಾಹಕರಿಗೆ ತುಂಬಾ ಅನುಕೂಲಕರವಾಗಿದೆ ಸಂಸ್ಥೆ ಇನ್ನಷ್ಟು ಸೇವೆಗಳೊಂದಿಗೆ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಕಟ್ಟಡ ಮಾಲಕ ರೂಪಾ ಗ್ರೂಪ್ಸ್ ನ ಮಾಲಕ ಸುಂದರ ರಾವ್ ಶುಭಹಾರೈಸಿದರು.

ಯುನೈಟೆಡ್ ಟೊಯೋಟಾ ಡೀಲರ್ ಪ್ರಿನ್ಸಿಪಲ್ ರಾಮ್ ಗೋಪಾಲ್ ರಾವ್ ಮಾತನಾಡಿ ಇನ್ನೂ ಮುಂದೇ ಸುಳ್ಯದ ಆಸುಪಾಸಿನ ಟೊಯೋಟಾ ಗ್ರಾಹಕರು ಸುಳ್ಯದಲ್ಲಿ ಸೇವೆಯನ್ನು ಪಡೆಯಬಹುದಾಗಿದೆ ಯುನೈಟೆಡ್ ಟೊಯೋಟಾ ಸಂಸ್ಥೆ ರಜತ ಸಂಭ್ರಮದ ಹೊಸ್ತಿಲಲ್ಲಿ ಇದೆ ನಮ್ಮ ಇನ್ನಷ್ಟು ವಿಸ್ತಾರಗೊಳ್ಳಲಿದೆ ಟೊಯೋಟಾ ಗ್ರಾಹಕರಿಗಾಗಿ ನಾವು ಗ್ರಾಮೀಣ ಸೇವೆಯನ್ನು ಆರಂಭಿಸಿದ್ದೇವೆ ಸುಳ್ಯದ ಜನತೆಯ ಸಹಕಾರಕ್ಕೆ ಯುನೈಟೆಡ್ ಟೊಯೋಟಾದ ಕೊಡುಗೆ ಎಂದವರು ತಿಳಿಸಿದರು.


ಈ ಸಂದರ್ಭದಲ್ಲಿ ಉದ್ಯಮಿಗಳಾದ ಹಾಜಿ ಇಬ್ರಾಹಿಂ ಕತ್ತಾರ್,ಶಾಫಿ ಬೊಳುಬೈಲು,ಜತ್ತಪ್ಪ ರೈ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಯುನೈಟೆಡ್ ಟೊಯೋಟಾ ಬ್ರಾಂಚ್ ಹೆಡ್ ಸಾಬುಜೋನ್,ಗ್ರೂಪ್ ಮ್ಯಾನೇಜರ್ ಮಾರ್ಕೆಟಿಂಗ್ ಸೋನಿಯಾ, ಸೇಲ್ಸ್ ಮ್ಯಾನೇಜರ್ ನವನೀತ್ ಟೊಯೋಟಾ ಉದ್ಯೋಗಿಗಳು ಸಹಕರಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.