ಹಳೆಗೇಟು :ಅಲ್ ಫಹಾಮ್ ಕಾರ್ನರ್ ಮತ್ತು ಫಿಶ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯ ಹಳೆಗೇಟಿನಲ್ಲಿ ರಹ್ಮಾನಿಯಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿದ್ದ ಮುಸ್ತಫಾ ಡೆಲ್ಮಾ ರವರ ಮಾಲಕತ್ವದ ಅಲ್ ಫಹಾಮ್ ಕಾರ್ನರ್ ಮತ್ತು ಫಿಶ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಮೊಗರ್ಪಣೆ ತಿರುಮಲ ಹೋಂಡಾ ಶೋ ರೂಮ್ ಮುಂಭಾಗಕ್ಕೆ ಸ್ಥಳಾಂತರ ಗೊಂಡು ಶುಭಾರಂಭ ಗೊಂಡಿದೆ.

ನೂತನ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟದ ಖ್ಯಾತ ವಾಗ್ಮಿ ನೌಶಾದ್ ಬಾಖವಿ ರವರು ಉದ್ಘಾಟನೆಗೊಳಿಸಿ ಪ್ರಾರ್ಥನೆ ನೆರವೇರಿಸಿ ಸಂಸ್ಥೆಗೆ ಶುಭಾರೈಸಿದರು.

ಈ ಸಂದರ್ಭದಲ್ಲಿ ಮೊಗರ್ಪಣೆ ಜುಮಾ ಮಸೀದಿಯ ಸಹಾಯಕ ಖತೀಬರಾದ ಫಾಹಿಝ್ ಝೌಹರಿ,ಮೂಸಾ ಮುಸ್ಲಿಯಾರ್, ಹಾಗೂ ಹಿರಿಯ ಉದ್ಯಮಿ ಅಬ್ದುಲ್ ರಝಾಕ್ ಹಾಜಿ ಶೀತಲ್ ಸ್ಥಳೀಯರಾದ ಬಿ ಎಂ ಎ ರಫೀಕ್, ಮುನೀರ್ ಹಳೆಗೇಟು,ಅಬ್ಬಾಸ್ ಕೋಯಾಸ್,ಸಿದ್ದೀಕ್ ಡೆಲ್ಮ,ಶರೀಫ್ ಡೆಲ್ಮ,ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ಸಮಾಜ ಸೇವಕ ಉನೈಸ್ ಪೆರಾಜೆ ಸೇರಿದಂತೆ ಇನ್ನೂ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.