







ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರಕ್ಕೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಲಭಿಸಿದೆ.
ಶಾಲೆಯಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಕುನಾಲ್ ರವಿತೇಜ್ 625 ರಲ್ಲಿ 624 ಅಂಕ ಗಳಿಸಿದ್ದು ರಾಜ್ಯಕ್ಕೆ ದ್ವಿತೀಯಸ್ಥಾನಿಯಾಗಿರುತ್ತಾನೆ.
ಅಮೃತ್ ಗೌಡ ಪಾಟೀಲ್ 621, ಕು.ತೃಪ್ತಿ 621, ಕಾರ್ತಿಕ್ ರಾಜ್ ಮರಿಗುಡಿ 619 ಅಂಕ ಗಳಿಸಿರುತ್ತಾರೆ. ಒಟ್ಟು 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಅಂಕ ಪಡೆದು ಉತ್ತಮ ಫಲಿತಾಂಶ ಲಭಿಸಿದೆ.










