ಬಾರ್ಪಣೆ ಎಂಬಲ್ಲಿ ರಸ್ತೆಯ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡಚಣೆ- ಸಾಲುಗಟ್ಟಿ ನಿಂತ ವಾಹನಗಳು

0

ನಾರ್ಕೋಡು ಕೋಲ್ಚಾರು ರಸ್ತೆ ಮಧ್ಯೆ ಬಾರ್ಪಣೆ ಎಂಬಲ್ಲಿ ಇದೀಗ ಸುರಿದ ಗಾಳಿ ಮಳೆಗೆ ಮರವೊಂದು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.
ಅಂತರ್ ರಾಜ್ಯ ರಸ್ತೆ ಇದಾಗಿದ್ದು ಕೇರಳದಿಂದ ಸುಳ್ಯ ಕಡೆಗೆ ಬರುತ್ತಿದ್ದ ಹಾಗೂ ಕೇರಳಕ್ಕೆ ಸಂಚರಿಸುವ ವಾಹನಗಳು ಸಾಲು ಗಟ್ಟಿ ನಿಂತವು. ಬಳಿಕ ಮಳೆಯನ್ನು ಲೆಕ್ಕಿಸದೆ ವಾಹನ ಸವಾರರು ಕೆಳಗಿಳಿದು ಮರವನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡರು. ಸ್ಥಳಿಯರು  ಸಹಕರಿಸಿದರು.