
ಜನಪ್ರಿಯ ಕನ್ನಡ ಸಿನಿ ನಟ ಧ್ರುವ ಸರ್ಜಾ ಮೇ.5 ರಂದು ಪತ್ನಿ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದ ಬಳಿಕ ಅವರು ಪ್ರಸಾದ ಸ್ವೀಕರಿಸಿದರು.









ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಧ್ರುವ ಸರ್ಜಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಗೋಪಿನಾಥ್ ಉಪಸ್ಥಿತರಿದ್ದರು.










