ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಥಬೀದಿಯಲ್ಲಿ ವಿಕಲಚೇತನರಿಗೆ ಹಾಗೂ ವಯೋವೃದ್ಧರಿಗೆ ಬ್ಯಾಟರಿ ಚಾಲಿತ ಹೊಸ ವಾಹನ ಸೇವೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ವಿಕಲಚೇತನರಿಗೆ ಹಾಗೂ ವಯೋವೃದ್ಧರಿಗೆ ಬ್ಯಾಟರಿ ಚಾಲಿತ ಹೊಸ ವಾಹನ ಸೇವೆ ಮೇ.5 ರಂದು ಸೇವೆ ಆರಂಭಿಸಿತು.

ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸದಸ್ಯ ಲೋಲಾಕ್ಷ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.
ಈ ಹಿಂದೆ ನಿತ್ಯಾನಂದ ಮುಂಡೋಡಿ ನೇತೃತ್ವದ ಆಡಳಿತ ಮಂಡಳಿ ಇದ್ದಾಗ ಆರಂಭವಾಗಿದ್ದ ವ್ಯವಸ್ಥೆ ಅದರ ಬಳಿಕ ನಿರಂತರ ಸೇವೆ ನೀಡುತ್ತಿದೆ. ಇದೀಗ ಹೊಸ ವಾಹನ ಬಂದಿದ್ದು ಹಿಂದಿಗಿಂತ ಸ್ವಲ್ಪ ಹೆಚ್ಚು ಯಾತ್ರಿಗಳನ್ನು ಕೊಂಡೊಯ್ಯವ ವ್ಯವಸ್ಥೆ ಇದೆ.