ಎಸ್.ಎಸ್.ಎಲ್. ಸಿ ಯಲ್ಲಿ 613 ಅಂಕ ಪಡೆದ ಫಾತಿಮತ್ ಶೈಮಾ ಎಸ್.ಎಂ. ಇವರಿಗೆ ಉಗ್ರಾಣಿ ಕುಟುಂಬಸ್ಥರಿಂದ ಸನ್ಮಾನ

0

2025ನೇ ಸಾಲಿನ ಎಸ್. ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 613 ಅಂಕವನ್ನು ಪಡೆದ ಉಗ್ರಾಣಿ ಕುಟುಂಬದ ಅಬ್ದುಲ್ ಮಜೀದ್ ಕೆಬಿ ಮತ್ತು ಮಿಸ್ರಿಯ ದಂಪತಿಯ ಪುತ್ರಿ ಸುಳ್ಯ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮತ್ ಶೈಮಾರನ್ನು ಉಗ್ರಾಣಿ ಕುಟುಂಬಸ್ಥರ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಉಗ್ರಾಣಿ ಕುಟುಂಬ ಸದಸ್ಯರಾದ ಶುಕೂರು ಹಾಜಿಯವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ಉಮ್ಮರ್ ಬೀಜದಕಟ್ಟೆ, ಹಮೀದ್ ಜನತಾ, ಶುಕೂರ್ ಹಾಜಿ, ರಿಜ್ವಾನ್ ಜನತಾ, ರಿಫಾಯಿ ಜನತಾ, ಅಬ್ದುಲ್ ಕಲಾಂ ಬೀಜಕೊಚ್ಚಿ, ಆಸಿಫ್ ದಾವಣೆಗೆರೆ, ಹಮೀದ್ ಉಗ್ರಾಣಿ, ಅಬ್ದುಲ್ ಮಜೀದ್ ಕೆ ಬಿ, ರಿಯಾಜ್ ಕಟ್ಟೆಕ್ಕಾರ್, ರಫೀಕ್ ಚಾಯ್ಸ್, ಅಬ್ದುಲ್ ಗಫ್ಫಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.