ನಡುಗಲ್ಲಿನಲ್ಲಿ ಕೆಲಸಕ್ಕಿದ್ದ ಮುಳ್ಳೇರಿಯಾದ ವ್ಯಕ್ತಿಯೋರ್ವರು ಮೇ.೬ ರಂದು ವಿಷ ಸೇವಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೇ.೯ ರಂದು ಮೃತಪಟ್ಟ ಘಟನೆ ವರದಿಯಾಗಿದೆ.








ಮುಳ್ಳೆರಿಯಾದ ಕೃಷ್ಣ ಮಣಿಯಾಣಿ ಎಂಬವರು ನಡುಗಲ್ಲಿನ ಅಶೋಕ್ ಕೊರಂಬಟ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದು ಮೊನ್ನೆ ದಿನ ಮಧ್ಯಾಹ್ನ ವಿಷ ಸೇವಿಸಿದ್ದರು. ಊಟ ಮಾಡಿ ವಾಂತಿ ಮಾಡಿಕೊಂಡಾಗ ವಿಷ ಸೇವಿಸಿರುವುದು ಮನೆಯವರ ಗಮನಕ್ಕೆ ಬಂದಿದ್ದು ಬಳಿಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಮಕ್ಕಳನ್ನು ಅಗಲಿರುವುದಾಗಿ ತಿಳಿದು ಬಂದಿದೆ. ಅವರು ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ತಿಳಿದು ಬಂದಿದೆ.










