ಅಲೆಕ್ಕಾಡಿ : ವಿದ್ಯುತ್ ಕಂಬ, ತಂತಿಗಳ ಬದಲಾವಣೆಗೆ ಆಗ್ರಹ

0


ಅಲೆಕ್ಕಾಡಿ, ನೂಜಾಡಿ, ಕೊಳಂಬಳ, ನೆಕ್ಕರೆ, ನೂಜಾಡಿ ಕಾಲೋನಿ ಸೇರಿದಂತೆ ಸುಮಾರು 55 ಮನೆಗಳಿಗೆ ವಿದ್ಯುತ್ ಸರಬರಾಜು ಆಗುತ್ತಿದ್ದು, ಈ ಮನೆಗಳಿಗೆ ಆಗಾಗ ವಿದ್ಯುತ್ ವ್ಯತ್ಯಯ ಆಗುತ್ತಿದ್ದು, ಸಂಬಂಧಿಸಿದ ನಿಗಮದ ಇಂಜಿನಿಯರ್ ಬಂದು ನೋಡಿದ್ದಾರೆ. ಈ ಕಂಬಗಳನ್ನು ಮತ್ತು ತಂತಿಗಳನ್ನು ಹಾಕಿ 35 ವರ್ಷ ಗಳಿಗಿಂತಲೂ ಹಳೆಯದಾಗಿದ್ದು, ಇಲ್ಲಿ ತಂತಿ ತುಂಡಾಗುವುದು ಸರ್ವೇ ಸಾಮಾನ್ಯ. ಇನ್ನು ಮಳೆಗಾಲ ಪ್ರಾರಂಭವಾಗುತ್ತಿದ್ದು, ಇದನ್ನು ಕೂಡಲೇ ಬದಲಾವಣೆ ಮಾಡಬೇಕೆಂದು ಆ ಭಾಗದ ಜನರು ಆಗ್ರಹಿಸಿದ್ದಾರೆ.