ಜೀವನದಲ್ಲೇ ಯಾವುದೇ ಅಪಘಾತ ಮಾಡಿಲ್ಲ, ಯಾರಿಗೂ ಆಘಾತ ಮಾಡಿಲ್ಲ: ಕೆ.ಎಂ.ಎಂ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸುಮಾರು 31ವರ್ಷಗಳ ಸುದೀರ್ಘ ಸೇವೆಗೈದು ಯಾವುದೇ ಒಂದೇ ಒಂದು ಅಪಘಾತ ಮಾಡದೇ ಮುಖ್ಯ ಚಿನ್ನದ ಪ್ರಶಸ್ತಿ ಪುರಸ್ಕೃತರಾದ ಮಹಮ್ಮದ್ ಕಲ್ಲುಗುಂಡಿ ಯವರು ಮೆ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ ಇವರ ನಿವೃತ್ತಿ ಜೀವನ ಹೊಸ್ತಿಲಲ್ಲಿರುವ ಇವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಮೆ.17 ರಂದು ಸುಳ್ಯ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ಅಭಿನಂದನ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ಉದ್ಘಾಟಿಸಿ ಮಾತನಾಡಿ
1994 ರಲ್ಲಿ ಚಾಲಕರಾಗಿ ಸೇರ್ಪಡೆ ಗೊಂಡು 2020 ರ ತನಕ 27 ವರ್ಷ ಮಡಿಕೇರಿಯಲ್ಲಿ ಚಾಲಕರಾಗಿ ಸೇವೆಸಲ್ಲಿಸಿ 2020 ರಲ್ಲಿ ಸುಳ್ಯ ಡಿಪೋ ಚಾಲಕ ತರಬೇತುದಾರರಾಗಿ ಪದೋನ್ನತ್ತಿ ಪಡೆದು ಸುಳ್ಯಕ್ಕೆ ಬಂದಿದ್ದಾರೆ.








ಚಾಲಕ ವೃತ್ತಿಯಲ್ಲಿ ಅಪಘಾತ ರಹಿತ ಚಾಲನೆಗೆ 2017 ರಲ್ಲಿ ರಜತ ಪದಕವನ್ನು ಪಡೆದರು, 2020 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದಾರೆ ಅಲ್ಲದೇ ಅವರ ಜೀವನದಲ್ಲಿ ಯಾವುದೇ ಅಪಘಾತ ಮಾಡಲಿಲ್ಲ ಅದರ ಜೋತೆಯು ಯಾವುದೇ ವೈಷಮ್ಯ ವಾಗಲಿ ಯಾರಿಗೂ ಆಘಾತ ಮಾಡದೇ ನಿಷ್ಕಳಂಕವಾಗಿ ಜೀವನ ಮಾಡಿದ ವ್ಯಕ್ತಿ ಮಹಮ್ಮದ್ ರವರು ಎಂದವರು ಹೇಳಿದರು ಸುಳ್ಯ ಸಾರ್ವಜನಿಕರ ಪರವಾಗಿ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ,ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿ ನಿರ್ದೇಶಕ ಕೆ ಪಿ ಜಾನಿ,ಸುಳ್ಯ ಸಂಯುಕ್ತ ಜಮಾಯತ್ ಅಧ್ಯಕ್ಷ ಮಹಮ್ಮದ್ ಕುಂಙಿ ಗೂನಡ್ಕ,ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಾಜಿ ಮುಸ್ತಫಾ ಕೆ ಎಂ,ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸುಳ್ಯ ಸುನ್ನಿ ಮಹಲ್ ಫೆಡರೇಶನ್ ನ ತಾಜ್ ಮಹಮ್ಮದ್ ಸಂಪಾಜೆ,ಕೆ ಎಸ್ ಆರ್ ಟಿ ಸಿ ಟಿಸಿ ಕುಶಾಲಪ್ಪ ಗೌಡ,ಚಾಲಕ ಮುಖ್ಯಸ್ಥ ಕೇಶವ,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಸುಳ್ಯ ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ,ಸುಳ್ಯ ಜಂಯ್ಯತ್ತುಲ್ ಪಲಾಹ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮೂಸಾ ಪೈಂಬಚ್ಚಾಲ್ ,ಉದ್ಯಮಿಗಳಾದ ಅಬ್ದುಲ್ ಲತೀಫ್ ಎಂ ಕೆ,ಇಬ್ರಾಹಿಂ ಕೆ ಬಿ,ಇಕ್ಬಾಲ್ ಮಡಿಕೇರಿ ಕೆ ಎಸ್ ಆರ್ ಟಿಸಿ ಯ ಧನರಾಜ್, ಗೋಪಾಲಕೃಷ್ಣ, ತೀರ್ಥಕುಮಾರ್, ತಿರ್ಥರಾಮ್, ಜಯಪ್ರಕಾಶ್ ಗೌಡ,ಭಗೀರಥ, ನಾಗರಾಜ್ ಟಿಸಿ,ಕೆಪಿ ಸೊಮಣ್ಣ,ಟಿಸಿ ಕುಶಾಲಪ್ಪ,ನಿವೃತ್ತ ಕೆ ಎಸ್ ಆರ್ ಟಿಸಿ ಚಾಲಕರಾದ ಅಬ್ಬಾಸ್, ಅಬ್ದುಲ್ ರಹಿಮಾನ್ ರಹಮಾನ್ ,ಮೊದಲಾದವರು ಸನ್ಮಾನಿಸಿ ಗೌರವಿಸಿದರು.
ಆರ್ಕುಟ್ ಮೊಬೈಲ್ ಮಾಲಕ ಶಬೀರ್ ಕಾರ್ಯಕ್ರಮ ನಿರೂಪಿಸಿದರು.
ಇವರ ಪತ್ನಿ ಸಫಿಯಾ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಉದ್ಯೋಗಿ ಅಬ್ದುಲ್ ವಾಶಿಮ್ ರಾಜ್,ಇನ್ನೋರ್ವ ಪುತ್ರ ಬೆಂಗಳೂರಿನಲ್ಲಿ ಕಂಪೆನಿ ಉದ್ಯೋಗಿ ಅಬೂ ತಾಶಿಮ್ ರಾಜ್,ಹಾಗೂ ಆಳಿಯ ನಿಜಾರ್ ಪುತ್ರಿ ಆಯಿಶಾ ತಾಸ್ಮಿಯಾ ಕುಟುಂಬಸ್ಥರು ಭಾಗವಹಿಸಿದರು.










