
ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ನಿರ್ದೇಶನದಂತೆ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಮಾಧಕ ದ್ರವ್ಯ ವಿರೋಧಿ ಅಭಿಯಾನ ಕರಪತ್ರ ಬಿಡುಗಡೆ ಪ್ರತಿಜ್ಞಾ ವಿಧಿ ಬೊಧನೆ ಹಾಗೂ ಸಹಿ ಸಂಗ್ರಹ ಅಭಿಯಾನ ಮೇ.18ರಂದು ನಡೆಯಿತು.









ಸಮಾರಂಭ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಆಶ್ರಫ್ ಗುಂಡಿ ವಹಿಸಿದ್ದರು. ಸದರ್ ಆಶ್ರಫ್ ಮುಸ್ಲಿಯಾರ್ ಅಡ್ಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದ್ಘಾಟನೆ ಮತ್ತು ಸಂದೇಶ ಭಾಷಣವನ್ನು ಅರಂತೋಡು ಜುಮಾ ಮಸೀದಿ ಖತಿಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಮಾತನಾಡಿ ಮಾದಕ ದ್ರವ್ಯದಿಂದ ಕುಟುಂಬಗಳು ಛಿದ್ರವಾಗುತ್ತವೆ, ಧರ್ಮ, ನೈತಿಕತೆ, ಶೀಲ ಮತ್ತು ಮಾನವಿಯತೆ ಎಲ್ಲವನ್ನೂ ನಾಶ ಮಾಡುತ್ತದೆ ಈ ಬಗ್ಗೆ ಜಾಗೃತರಾಗಬೇಕೆಂದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಾಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ಮಾತನಾಡಿ ಎಲ್ಲಾ ಕ್ಯಾಂಪಸ್ ಗಳಲ್ಲೂ ಡ್ರಗ್ಸ್ ವಿರುದ್ದ ಜಾಗ್ರತಿ ಮೂಡಿಸುವ ಕಾರ್ಯ ಆಗಬೇಕು ವಿದ್ಯಾರ್ಥಿಗಳಲ್ಲೂ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು. ನಿವೃತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದ್ರುದ್ಧೀನ್ ಪಟೇಲ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮದರಸ ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಮಾದಕ ವ್ಯಸನದ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಸಹಿ ಸಂಗ್ರಹಿಸಲಾಯಿತು. ಸಭೆಯಲ್ಲಿ ಜಮಾತ್ ಕಾರ್ಯದರ್ಶಿ ಕೆ ಎಂ ಮೂಸನ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್, ವಿಕಾಯ ಸದಸ್ಯ ತಾಜುದ್ದೀನ್ ಅರಂತೋಡು, ಮುಜೀಬ್, ಹನೀಫ್ ಕುನ್ನಿಲ್, ಹಮೀದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.








