








ಪುತ್ತೂರಿನ ವಿವೇಕಾನಂದ ಕಾಲೇಜಿನ ಕ್ಯಾಂಪಸ್ ನಲ್ಲಿರುವ ಕೆನರಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾಗಿ ನಡುಗಲ್ಲಿನ ತೇಜಕುಮಾರ್ ಪಲ್ಲತಡ್ಕ ಮೇ 7ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಆರಂಭದಲ್ಲಿ ಆಫೀಸರ್ ಆಗಿ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ, ಬಳಿಕ ಬೆಳ್ಳಾರೆ, ಪಂಜ, ಪುತ್ತೂರು ಪ್ರಾದೇಶಿಕ ಕಚೇರಿಯಲ್ಲಿ ಸೇವೆ ಸಲ್ಲಿಸಿರುವ ಇವರು ನಾಲ್ಕೂರು ಗ್ರಾಮದ ನಡುಗಲ್ಲಿನ ಪಲ್ಲತಡ್ಕ ಶ್ರೀಧರ ಗೌಡ ಮತ್ತು ಹೊನ್ನಮ್ಮ ದಂಪತಿಗಳ ಪುತ್ರ. ತೇಜ ಕುಮಾರ್ ಅವರ ಪತ್ನಿ ಪೂಜಾ, ಪುತ್ರ ಧನೀಶ್.










