ಮತ್ತೆ ಬಾಯ್ತೆರೆದು ನಿಂತ ಸುಳ್ಯ ರಥಬೀದಿ ತಿರುವಿನಲ್ಲಿ ದೊಡ್ಡ ಗಾತ್ರದ ಹೊಂಡ

0

ಅಸಡ್ಡೆ ತೋರಿಸುತ್ತಿರುವ ಅಧಿಕಾರಿಗಳ ಬಗ್ಗೆ ಸ್ಥಳೀಯರ ಆಕ್ರೋಶ

ಸುಳ್ಯ ನಗರದ ಮುಖ್ಯ ರಸ್ತೆಯಿಂದ ರಥಬೀದಿ ತಿರುವಿನಲ್ಲಿ ರಸ್ತೆ ಬದಿ ಮತ್ತೆ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಆತಂಕ ತಂದೊಡ್ಡಿದೆ.

ಈ ಮೊದಲು ಹೊಂಡ ಬಿದ್ದಾಗ ನಗರ ಪಂಚಾಯತ್ ವತಿಯಿಂದ ಅದನ್ನು ಕಲ್ಲು ಮತ್ತು ಮಣ್ಣು ಹಾಕಿ ತಾತ್ಕಾಲಿಕ ಮುಚ್ಚುವ ಕೆಲಸವನ್ನು ಮಾಡಿತ್ತು.
ಈ ವೇಳೆ ಸ್ಥಳೀಯರು ಗುಂಡಿ ಮುಚ್ಚಲು ಬಂದ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಈ ಗುಂಡಿಯನ್ನು ಈ ರೀತಿ ಮೇಲಿಂದ ಮೇಲೆ ಮುಚ್ಚಿ ದರೆ ಸಾಲದು. ಭೂಮಿಯ ಅಡಿಯಿಂದಲೇ ಇದು ಬಾಯಿ ತೆರೆದು ನಿಂತಿದ್ದು ಅದನ್ನು ಸರಿಯಾಗಿ ಪರಿಶೀಲನೆ ಮಾಡಿ ದುರಸ್ಥಿ ಕಾರ್ಯ ಮಾಡುವಂತೆ ಸಲಹೆ ನೀಡಿದ್ದರು.


ಆದರೆ ಇದಕ್ಕೆ ಕ್ಯಾರೇ ಮಾಡದ ಸ್ಥಳೀಯ ಸಂಸ್ಥೆ ಮೇಲಿಂದ ಮೇಲೆ ರಿಪೇರಿ ಮಾಡಿ ಹೋಗಿದ್ದು ಇದೀಗ ಅದೇ ಹೊಂಡ ಮತ್ತೆ ಬಿರುಕು ಬಿಟ್ಟು ಈಗ ದೊಡ್ಡ ಹೊಂಡವಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.