ಕಲ್ಮಕಾರಿನ ಕಾಜಿಮಾಡ್ಕ ದವರಾಗಿದ್ದು ಪ್ರಸ್ತುತ ಕಂದ್ರ ಪ್ಪಾಡಿಯಲ್ಲಿ ನೆಲೆಸಿರುವ, ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನ ದ ಟೊಪ್ಪಿ ಪೂಜಾರಿಯಾಗಿದ್ದ ದೊಡ್ಡಣ್ಣ ಗೌಡ ಕಾಜಿಮಡ್ಕರವರು ನಿನ್ನೆ (ಮೇ. 20)ರಂದು ಸ್ವಗೃದಲ್ಲಿ ನಿಧಾನರಾದರು. ಅವರಿಗೆ 82 ವರ್ಷ ಪ್ರಾಯವಾಗಿತ್ತು.
ದೊಡ್ಡಣ್ಣ ಗೌಡರು 1984ರಿಂದ 1987ರವರೆಗೆ ಕಲ್ಮಕಾರಿನ ಶಿರಾಡಿ ಮತ್ತು ಪುರುಷ ದೈವದ ಪರಿಚರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆ ಸಂದರ್ಭ ಅವರಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಪ್ರಶ್ನ ಚಿಂತನೆಯಲ್ಲಿ ನೋಡಿದಾಗ ದೊಡ್ಡಣ್ಣ ಗೌಡರು ಕಂದ್ರಪ್ಪಾಡಿ ಶ್ರೀ ಪುರುಷ ದೈವದ ಪರಿಚರಕರಾಗಿ ಸೇವೆ ಮಾಡುವ ಹಕ್ಕಿನವರಾಗಿರುತ್ತಾರೆ ಎಂದು ಕಂಡು ಬಂತೆನ್ನಲಾಗಿದೆ. ಹೀಗಾಗಿ 1988ರಲ್ಲಿ ಕಂದ್ರ ಪ್ಪಾಡಿ ದೈವಸ್ಥಾನದಲ್ಲಿ ನಡೆದ ನೇಮೋತ್ಸವದಲ್ಲಿ ಪರಿಚರಕರಾಗಿ 2021ರವರೆಗೆ ಒಟ್ಟು 33 ವರ್ಷ ಸೇವೆ ಸಲ್ಲಿಸಿದ್ದರು.








2011ರಲ್ಲಿ ನಡೆದ ದೈವಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿಯೂ ಸಂಪೂರ್ಣ ತೊಡ ಗಿಸಿಕೊಂಡಿದ್ದರು. ಅಲ್ಲದೇ ಊರು ಗೌಡರಾಗಿಯೂ ಹೆಸರಾಗಿದ್ದರು. ಅವರ ಸೇವೆಯನ್ನು ಗುರುತಿಸಿ ದೈವಸ್ಥಾನ ದ ವತಿಯಿಂದ ಸನ್ಮಾನಿಸಲಾಗಿತ್ತು.
ಮೃತರು ಪುತ್ರ ಪದ್ಮನಾಭ, ಪುತ್ರಿಯರಾದ ಸಾವಿತ್ರಿ, ಭಾಗೀರಥಿ, ವಿಶಾಲಾಕ್ಷಿ ಯವರನ್ನು ಅಗಲಿದ್ದಾರೆ.










