ನೇಸರ ಬಿ.ಕೆ. ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ

0

ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆಯ ವಿದ್ಯಾರ್ಥಿ ನೇಸರ ಬಿ.ಕೆ. ಇವರು ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ (AISSEE) ಯಲ್ಲಿ ತೇರ್ಗಡೆ ಹೊಂದಿ ಸೈನಿಕ ಶಾಲೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಲ್ಲದೆ ಇವರು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ JNV ಗೂ ಆಯ್ಕೆಯಾಗಿದ್ದಾರೆ. ಇವರು ಐವರ್ನಾಡು ಗ್ರಾಮದ ಭರತ್ ಕುಮಾರ್ ಮತ್ತು ಕವಿತಾ ಸಿ. ಕೆ. ದಂಪತಿಯರ ಪುತ್ರ.