ಮೇ.31: ಕುದ್ಮಾರು ಸ.ಉ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಶಾಲಪ್ಪ ಬರೆಮೇಲು-ಪಂಜ ನಿವೃತ್ತಿ

0

ಪುತ್ತೂರು ತಾಲೂಕು ಕುದ್ಮಾರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕುಶಾಲಪ್ಪ ಬರೆಮೇಲು-ಪಂಜ ರವರು ಮೇ.31 ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಅವರು ಐವತೊಕ್ಲು ಗ್ರಾಮದ ಬರೆಮೇಲು ಶ್ರೀಮತಿ ಕಮಲ ಮತ್ತು ಶ್ರೀ ಬಾಬು ಗೌಡರ ಪುತ್ರ. ಉನ್ನತ ವಿದ್ಯಾಭ್ಯಾಸವನ್ನು ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ ಮಂಗಳೂರು ಡಯಟ್ ಇಲ್ಲಿ ಟಿ. ಸಿ. ಎಚ್ ಪೂರೈಸಿದರು.

27-07-1994 ರಂದು ಸರಕಾರಿ ಶಿಕ್ಷಕನಾಗಿ ಪಡುಬೆಟ್ಟ ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆಗೆ ನೇಮಕಗೊಂಡು ಅಲ್ಲಿ ಹತ್ತು ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿ ಜೊತೆಯಲ್ಲಿ ಸ್ಕೌಟ್ ,ಯೋಗ ಇತ್ಯಾದಿ ತರಬೇತಿಯನ್ನು ಮಕ್ಕಳಿಗೆ ಪಾಠದ ಜೊತೆಯಲ್ಲಿ ಕೊಡಿಸುತಿದ್ದರು. ಬಳಿಕ ಕುದ್ಮಾರು ದ ಕ ಜಿ. ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಹನ್ನೆರಡು ವರ್ಷಗಳ ಸೇವೆಯನ್ನು ಮಾಡಿ ಅಲ್ಲಿಂದ ವರ್ಗಾವಣೆ ಗೊಂಡು ಸವಣೂರು ದ. ಕ ಜಿ. ಪಂ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರು ವರ್ಷಗಳ ಸೇವೆ ಸಲ್ಲಿಸಿದರು. 30-4-2022 ರಂದು ಪದೋನ್ನತಿ ಹೊಂದಿ ಕುದ್ಮಾರು ದ .ಕ .ಜಿ ಪಂ ಉ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿ ಮೇ.31 ರಂದು ವಯೋ ನಿವೃತ್ತ ಹೊಂದಲಿದ್ದಾರೆ..ಜೊತೆಯಲ್ಲಿ ಕೋರೋನಾ ಮಹಾಮಾರಿ ಸಮಯದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಹಾಗೂ ಸವಣೂರು ಗ್ರಾಮ ಪಂಚಾಯತ್ ನಲ್ಲಿ ಕೋರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿರುತ್ತಾರೆ.

ಸ್ಕೌಟ್,ಯೋಗ ತರಬೇತಿಯನ್ನು ಪಡೆದು ಮಕ್ಕಳಿಗೆ ತರಬೇತಿ ನೀಡಿದ್ದಾರೆ.ನೆಲ್ಯಾಡಿ ಜೂನಿಯರ್ ಚೇಂಬರ್ ನ ಅಧ್ಯಕ್ಷರಾಗಿ ಅನೇಕ ಸಮಾಜ ಸೇವೆಯನ್ನು ಮಾಡಿದ್ದಾರೆ. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ 4 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಪತ್ನಿ ಬೊಬ್ಬೆಕೇರಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ,ಮಗ ಮಿಥುನ್.ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ.