ದುಗ್ಗಲಡ್ಕ ; ಹೆದ್ದಾರಿಗೆ ಬೀಳುವ ಹಂತದಲ್ಲಿರುವ ಮರ

0

ತೆರವುಗೊಳಿಸಿ ಅಪಾಯವನ್ನು ತಪ್ಪಿಸಬೇಕಿದೆ

ದುಗ್ಗಲಡ್ಕ ಪೇಟೆಯಿಂದ ಸುಳ್ಯಕ್ಕೆ ಬರುವ ರಸ್ತೆಯ ಕೊಯಿಕುಳಿ ತಿರುವಿನಲ್ಲಿ ಎರಡು ಹೆಬ್ಬಲಸು ಮರಗಳು ಬರೆಯಿಂದ ಜರಿದು ರಸ್ತೆಗೆ ಬೀಳುವ ಹಂತದಲ್ಲಿದೆ.

ಬೀಳಲು ಕ್ಷಣಗಣನೆ ಮಾಡುತ್ತಿರುವ ಈ ಎರಡು ಮರಗಳನ್ನು ತಕ್ಷಣ ತೆರವು ಮಾಡಬೇಕಾಗಿದೆ.


ಹೆದ್ದಾರಿಯ ಮೇಲೆಯೇ ಬೀಳುವ ಅಪಾಯವಿದ್ದು, ಅದರಡಿಯಲ್ಲಿ ಟ್ರಾನ್ಸ್ ಫಾರ್ಮರ್ ಕೂಡ ಇರುವುದರಿಂದ ಮರವನ್ನು ತಕ್ಷಣ ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಾಗಿದೆ.
ಮರ ರಸ್ತೆಗೆ ಬಿದ್ದಲ್ಲಿ ಪ್ರಾಣಾಪಾಯ ಸಂಭವಿಸಬಹುದಾಗಿದೆ.