ಆಲೆಟ್ಟಿ ಸದಾಶಿವ ದೇವಳದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ

0

ಹಸೆ ಮಣೆ ಏರಿದ ಸ್ಥಳೀಯ ಎರಡು ಜೋಡಿಗಳು

ಆಲೆಟ್ಟಿಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹವು ಮೇ.28 ರಂದು ನಡೆಯಿತು.

ದೇವಸ್ಥಾನದ
ಮೊಕ್ತೇಸರರಾದ ಹೇಮಚಂದ್ರ ಬೈಪಡಿತಾಯ ರವರ ಉಪಸ್ಥಿತಿಯಲ್ಲಿ ಅರಂಬೂರು ಭಾರದ್ವಾಜಾಶ್ರಮದ ಪುರೋಹಿತ ವೆಂಕಟೇಶ್ ಶಾಸ್ತ್ರಿಯವರು ಎರಡು ಜೋಡಿಗಳಿಗೆ ಶುಭ ಮುಹೂರ್ತದಲ್ಲಿ
ಧಾರಾ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ಆಲೆಟ್ಟಿಯ ಕಟ್ಟೆಕಳ ನಿವಾಸಿ ಬೊಳಿಯಪ್ಪ ನಾಯ್ಕರವರ ಪುತ್ರಿ ಚಿ.ಸೌ ಸವಿತಾ ಮತ್ತು ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಶೇಷಪ್ಪ ನಾಯ್ಕರವರ ಪುತ್ರ ಚಿ.ರಾ. ರಮೇಶ್ ಹಾಗೂ
ಆಲೆಟ್ಟಿಯ ಗುಂಡ್ಯ ಚೋಮ ರವರ ಪುತ್ರಿ ಚಿ.ಸೌ. ಮಾಧುರಿ ಮತ್ತು ಮಂಗಳೂರು ತಾಲೂಕು ಬೊಳಿಯಾರು ಗ್ರಾಮದ ನಾರಾಯಣ ರವರ ಪುತ್ರ ಚಿ.ರಾ.ಶರತ್ ಕುಮಾರ್ ಜೋಡಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ಬಂಧು ಮಿತ್ರರು ನವ ದಂಪತಿಗಳಿಗೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮ:

ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕಸ್ತೂರಿ ನರ್ಸರಿ ಮಾಲಕರು,ಉದ್ಯಮಿ ಮಧುಸೂದನ್ ಕುಂಭಕೋಡು, ಶ್ರೀಮತಿ ಲತಾ ಮಧುಸೂದನ್,
ಜೀ. ಸ. ಗೌರವಾಧ್ಯಕ್ಷರು, ಹಿರಿಯ ಉದ್ಯಮಿ
ಕೃಷ್ಣಕಾಮತ್ ಅರಂಬೂರು,ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ, ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಮೊಕ್ತೇಸರರಾದಶ್ರೀಪತಿಬೈಪಡಿತಾಯ, ಅರ್ಚಕ ಹರ್ಷಿತ್ ಬನ್ನಿಂತಾಯ,
ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ವ್ಯ.ಸ.ಮಾಜಿ ಅಧ್ಯಕ್ಷ ರತ್ನಾಕರ ಗೌಡ ಕುಡೆಕಲ್ಲು,ಜೀ.ಸ.ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ,ಪಂ. ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ. ಸ. ಅಧ್ಯಕ್ಷ ದಿನೇಶ್ ಕೋಲ್ಚಾರು, ಪಂ. ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ,ನಾರ್ಕೋಡು ಟ್ರೇಡರ್ಸ್ ಮಾಲಕ ಮುಕುಂದ ನಾರ್ಕೋಡು, ಸ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ನಿವೃತ್ತ ಪೊಲೀಸ್ ಅಧಿಕಾರಿ ಗಂಗಾಧರ ಗೌಡ ಕುಡೆಕಲ್ಲು, ಬಡ್ಡಡ್ಕ
ಅಮರ ಕ್ರೀಡಾ ಮತ್ತು ಕಲಾಸಂಘದ ಅಧ್ಯಕ್ಷ ಕಮಲಾಕ್ಷ ಬಡ್ಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಗೌರಿ ಆಲೆಟ್ಟಿ ಪ್ರಾರ್ಥಿಸಿದರು.
ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಪ್ರಾಸ್ತಾವಿಕವಾಗಿ ಮಾತಿನೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ವಂದಿಸಿದರು.
ಪಂ. ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸಹಕರಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.