ಬಳ್ಪ ಕೇನ್ಯ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ ಮೇ. 26ರಂದು ಬಳ್ಪ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಭರ್ತಿಗೊಂಡ ಸಂತೋಷ್ ರೈಯವರನ್ನು ಸನ್ಮಾನಿಸಲಾಯಿತು.








ವಾರ್ಷಿಕ ಲೆಕ್ಕಪತ್ರವನ್ನು ಉಪ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮೆಹಬೂಬ್ ಇಲಾ ವಾಚಿಸಿದರು. ವೇದಿಕೆಯಲ್ಲಿ ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ವಲಯ ಅರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ ಪಂಜ ಪರಿವಾರ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ಗುತ್ತು, ಸಂತೋಷ್ ರೈ ಕೇನ್ಯ, ಕೇನ್ಯ ಅರಣ್ಯ ಸಮಿತಿ ಅಧ್ಯಕ್ಷ ವಿಠಲ ರೈ ಕಂಡೆಬಾಯಿ, ಬಳ್ಪ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಬುಡೆಂಗಿ ಉಪಸ್ಥಿತರಿದ್ದರು. ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಸ್ವಾಗತಿಸಿ, ಅರಣ್ಯ ರಕ್ಷಕ ಧನಂಜಯ ವಂದಿಸಿದರು. ಪ್ರಸನ್ನ ವೈ.ಟಿ. ಕಾರ್ಯಕ್ರಮ ನಿರೂಪಿಸಿದರು.










