ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಯಶಸ್ವತಿ ಎಂ.ಎಸ್. ರವರು ಮೇ. 31ರಂದು ಸೇವಾ ನಿವೃತ್ತಿ ಹೊಂದಿದರು.








ಪುತ್ತೂರು ತಾಲೂಕು ಪಡೂರು ಗ್ರಾಮದ ಮಾತಾವು ಮನೆ ಶೇಷಪ್ಪ ಗೌಡ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ಪುತ್ರಿಯಾಗಿ 13-05-1965ರಂದು ಜನಿಸಿದ ಯಶಸ್ವತಿ ಎಂ.ಎಸ್. ರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರ ಹಾಗೂ ಬಿ.ಇ.ಎಂ. ಹಿರಿಯ ಪ್ರಾಥಮಿಕ ಶಾಲೆ ಮಂಜಲ್ ಪೂರೈಸಿ, ಪುತ್ತೂರಿನ ಸೈಂಟ್ ವಿಕ್ಟರ್ ಗಲ್ಸ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟುವಿನಲ್ಲಿ ಪದವಿ ಪೂರ್ವ ಶಿಕ್ಷಣ, ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಇಕೊನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು 1997ರ ಮಾ. 22ರಂದು ಬೆಂಗಳೂರಿನ ಎನ್.ಎಸ್.ಎ.ಕೆ ಪಾಲಿಟೆಕ್ನಿಕ್‌ನಲ್ಲಿ ಬೆರಳಚ್ಚುಗಾರರಾಗಿ ಸೇವೆಗೆ ಸೇರ್ಪಡೆಗೊಂಡು ನಂತರ 01-02-2023 ರಂದು ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ಗೆ ವರ್ಗಾವಣೆಗೊಂಡರು.
ಅರಂತೋಡು ಉಳುವಾರು ಮನೆ ರಾಮಕೃಷ್ಣ ಗೌಡ ಹಾಗೂ ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ಸೀತಾರಾಮ ಗೌಡ ರೊಂದಿಗೆ 1988 ರಲ್ಲಿ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರಿಗೆ ಇಬ್ಬರು ಮಕ್ಕಳು. ಪುತ್ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಹನಿವೆಲ್ ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಸೀನಿಯರ್ ಇಂಜಿನಿಯರ್ ಹಾಗೂ ಸೊಸೆ ಜೆನ್ ಪ್ಯಾಕ್ಟ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಎಂ.ಎಸ್.ಸಿ (ಅಗ್ರಿಕಲ್ಟರ್ ಪದವಿ ಪಡೆದು ಕೊರ್‌ಟೇವ ಅಗ್ರಿ ಸಯನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಟೊಕ್ಸಿಕೋಲೋಜಿಯಲ್ಲಿ ಟೆಕ್ನಿಕಲ್ ಸ್ಪೆಷಲಿಸ್ಟ್ ಹಾಗೂ ಅಳಿಯ ಹೈಫೈ ಪ್ರೋಜೆಕ್ಟ್ ಇಂಡಿಯಾ ಪ್ರೈವೆಟ್ ಇಂಡಿಯಾ ಲಿಮಿಟೆಡ್ ಕಂಪೆನಿಯಲ್ಲಿ ಫೌಂಡರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.










