ಮದುವೆಯಾಗುವುದಾಗಿ ನಂಬಿಸಿ ,ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್ ಮದುವೆಯೂ ಆಗಿ ಈಗ ಮದುವೆ ನಿರಾಕರಿಸುತ್ತಿರುವರೆನ್ನಲಾದ ಪಂಜ ಮೂಲದ ಡಾ.ಆದರ್ಶ ರವರ ವಿರುದ್ಧ ಮೈಸೂರಿನ ಅನೂಹ್ಯ ಎಂಬ ಯುವತಿ ನೀಡಿರುವ ಕೇಸಿಗೆ ಸಂಬಂಧಿಸಿ ಜೂ 1೦ ರಂದು ಸಂಜೆ ಪಂಜದ ಕರಿಕ್ಕಳ ಸಮೀಪದ ನಿವಾಸಿ ರಜಿತ್ ಭಟ್ ಎಂಬವರನ್ನು ಮೈಸೂರು ಪೋಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆಂಬ ವಿಚಾರ ಗೊತ್ತಾಗಿದೆ.








ರಂಜಿತ್ ಭಟ್ ರವರು ಹಳೆಗೇಟು ಬಳಿ ಹೋಟೆಲ್ ಒಂದಕ್ಕೆ ತೆರಳುತಿದ್ದ ವೇಳೆ ಖಾಸಗಿ ಕಾರಿನಲ್ಲಿ ಸಿವಿಲ್ ಡ್ರೆಸ್ ನಲ್ಲಿ ಬಂದಿದ್ದ ಸುಮಾರು 4 ಮಂದಿ ಪೊಲೀಸರ ತಂಡ ಅವರನ್ನು ತಮ್ಮ ಕಷ್ಟಡಿಗೆ ಪಡೆದು ಅವರು ಬಂದಿದ್ದ ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ.
ಸ್ಥಳೀಯರ ಪ್ರಕಾರ ರಜಿತ್ ಭಟ್ ರವರನ್ನು ಪೊಲೀಸರು ಏಕಾಏಕಿ ಬಂದು ಸಿನಿಮೀಯ ರೀತಿಯಲ್ಲಿ ತಮ್ಮ ಕಷ್ಟಡಿಗೆ ಪಡೆದಾಗ ಅಲ್ಲೇ ಇದ್ದ ಸಾರ್ವಜನಿಕರು ಅಲ್ಪ ಸಮಯ ಗಾಬರಿ ಗೊಂಡ ಘಟನೆಯೂ ನಡೆಯಿತು ಎನ್ನಲಾಗಿದೆ.










