ಸುಳ್ಯ ಪೊಲೀಸ್ ಠಾಣೆಯಿಂದ ಓರ್ವ ಹೆಡ್ ಕಾನ್ಸ್ಟೇಬಲ್ ಹಾಗೂ 4 ಮಂದಿ ಪೊಲೀಸ್ ಸಿಬ್ಬಂದಿಗಳು ವರ್ಗಾವಣೆ

0

ಒಂದೇ ಠಾಣೆಯಲ್ಲಿ 5ವರ್ಷ ಸೇವೆ ಸಲ್ಲಿಸಿದ ಪೊಲೀಸರನ್ನು ವರ್ಗಾವಣೆ ಮಾಡುವ ನಿಯಮ ಪ್ರಕಾರ ಸುಳ್ಯ ಠಾಣೆಯಿಂದ ಓರ್ವ ಹೆಡ್ ಕಾನ್ಸ್ಟೇಬಲ್ ಮತ್ತು 4 ಮಂದಿ ಪೊಲೀಸ್ ಸಿಬ್ಬಂದಿಗಳು ಬೇರೆ ಠಾಣೆಗಳಿಗೆ ವರ್ಗಾವಣೆ ಆದೇಶ ಗೊಂಡಿದೆ.

ಪೊಲೀಸ್ ಸಿಬ್ಬಂದಿಗಳಾದ ಹೈದರ್ ರವರು ಸುಳ್ಯ ದಿಂದ ಪುತ್ತೂರು ಟ್ರಾಫಿಕ್ ವಿಭಾಗ ಕ್ಕೆ, ಜಾವೆದ್ ರವರು ಬೆಳ್ತಂಗಡಿ ಟ್ರಾಫಿಕ್ ವಿಭಾಗಕ್ಕೆ,ಶ್ರೀಮತಿ ವತ್ಸಲಾ ರಾಮಕುಂಜ ರವರು ಪುತ್ತೂರು ಗ್ರಾಮಾಂತರ ಠಾಣೆಗೆ,ರಾಜುರವರು ಬೆಳ್ಳಾರೆ ಠಾಣೆಗೆ, ಹೆಡ್ ಕಾನ್ಸ್ಟೇಬಲ್ ಪುರುಷೋತ್ತಮರವರು ಪುತ್ತೂರು ಟ್ರಾಫಿಕ್ ವಿಭಾಗ ಕ್ಕೆ ವರ್ಗಾವಣೆ ಗೊಂಡಿದ್ದಾರೆ.

ಇವರುಗಳ ಸ್ಥಾನಕ್ಕೆ ಬೇರೆ ಠಾಣೆಗಳಿಂದ ಸಿಬ್ಬಂದಿಗಳು ಸುಳ್ಯ ಠಾಣೆಗೆ ವರ್ಗಾವಣೆ ಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.