ಸುಳ್ಯ : ಕುರುಂಜಿ ಭಾಗ್ ಬಳಿ ಯುವಕರ ನಡುವೆ ಹೊಡೆದಾಟ

0

ಪೊಲೀಸರ ಆಗಮನ, ಇತ್ತಂಡದ ಮೇಲೆ ಪ್ರಕರಣ ದಾಖಲು

ಆರೋಪಿಗಳಿಗೆ ನ್ಯಾಯಾಂಗ ಬಂಧನ

ಸುಳ್ಯದ ಕುರುಂಜಿ ಭಾಗ್ ಸರ್ಕಲ್ ಬಳಿ ಜೂ 10 ರಂದು ಸಂಜೆ ಸುಮಾರು 6 ಘಂಟೆಗೆ ಎರಡು ತಂಡದ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟವಾದ ಘಟನೆ ನಡೆದಿದ್ದು ಸ್ಥಳಕ್ಕೆ ಬಂದ ಸುಳ್ಯ ಪೊಲೀಸರು ಯುವಕರನ್ನು ಠಾಣೆಗೆ ಕರೆ ದೊಯ್ದು ವಿಚಾರಣೆ ನಡೆಸಿ ಎರಡು ತಂಡದವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿದ್ದು ರಾತ್ರಿಯೇ ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದಾಗ ಆರೋಪಿಗಳಿಗೆ ನ್ಯಾಯಾಂಗ ಬಂಧನ ವೇಳೆ ವಿಧಿಸಲಾಗಿದೆ.

ಆರೋಪಿಗಳ ಮೇಲೆ ಅ.ಕ್ರ ನಂ: 65/2025 ಕಲಂ: 189.(2)191(2)115(2)352 351(2) 190 BNS 2023 ಪ್ರಕರಣ ದಾಖಲಿಸಲಾಗಿದೆ.

ದೂರಿನಲ್ಲಿ
ಆರೋಪಿಗಳಾದ ಮಹಮ್ಮದ್ ರಾಶಿಕ್(19) ತಂದೆ: ಜಿ ಕೆ ಅಬ್ದುಲ್ ರಜಾಕ್ ಜಯನಗರ, ಮಹಮ್ಮದ್ ಸುನೈಪ್(23) ತಂದೆ ಅಬ್ದುಲ್ ಜಯನಗರ
, ಅಂಕಿತ್(22) ತಂದೆ: ಚಂದ್ರಶೇಖರ ರೈ ನಾವೂರು, ಕೀರ್ತನ್(21) ತಂದೆ: ದಿ. ಕುಶಾಲಪ್ಪ ಗೌಡ ಕದಿಕಡ್ಕ, ಆದಿತ್ಯನ್(20) ತಂದೆ: ಅಶೋಕ್ ಕುಮಾರ್ ಕದಿಕಡ್ಕ ಎಂಬುವವರು
6 ಗಂಟೆಗೆ ಕೆವಿಜಿ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ಗುಂಪು ಸೇರಿಕೊಂಡು ಸಾಮಾಜಿಕ ಸಾಮರಸ್ಯ ಹದಗೆಡುವ ರೀತಿಯಲ್ಲಿ ಯಾವುದೋ ಕೇಡನ್ನು ಮಾಡುವ ಉದ್ದೇಶದಿಂದ ಕೈಯಿಂದ ಹಲ್ಲೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದ್ದು ಪೊಲೀಸರು ಸುಮೋಟೋ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.