ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

0

ಸಂಕೇಶ್ ಫೌಂಡೇಶನ್ ವತಿಯಿಂದ ಬಕ್ರಿದ್ ಆಚರಣೆ

ವಿಶೇಷ ಮಕ್ಕಳಜೊತೆ ಒಂದು ದಿನ ಬೆರೆಯುವ ಉದ್ದೇಶದಿಂದ ಹುಟ್ಟು ಹಬ್ಬ ಆಚರಿಸಿದೆ: ಎ ಆರ್ ಎಸ್

ಎಂ ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆ ಸುಳ್ಯ ಇದರ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾದ ವಿಶೇಷ ಚೇತನ ಮಕ್ಕಳ ಸನ್ಮಾನ ಕಾರ್ಯಕ್ರಮ ಜೂ.10 ರಂದು ನಡೆಯಿತು.

ಎಂ.ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆ ಹಾಗೂ ಸಂಕೇಶ್ ಫೌಂಡೇಶನ್ ಸುಳ್ಯ ಇದರ ಆಶ್ರಯದಲ್ಲಿ ಬಕ್ರೀದ್ ಹಬ್ಬ ಹಾಗೂ ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ್ ರವರ 53 ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ಜೊತೆ ಆಚರಿಸಿದರು. ಹತ್ತನೇ ತರಗತಿ ತೇರ್ಗಡೆಯಾದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತಿಮ್ಮಪ್ಪ ನಾಯ್ಕ ಪೊಲೀಸ್ ವೃತ ನಿರೀಕ್ಷರು ಸುಳ್ಯ ನೆರವೇರಿಸಿ ಶುಭಹಾರೈಸಿದರು. ಸಮಾರಂಭದಲ್ಲಿ ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ವಿಶೇಷ ಚೇತನ ವಿಧ್ಯಾರ್ಥಿಗಳಾದ ಕ್ಲವಿಟಾ, ಪ್ರದೀಪ್ , ಅಗಷ್ಟಿನ್, ವೇಣುಪ್ರಸಾದ್, ಗಣೇಶ್ , ಯಶ್ವಿನ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಭಾ ವೇದಿಕೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ಶಿವರಾಜ್ ಗಾಯಕವಾಡ್,ಉಮಾದೇವಿ ಸಹಾಯಕ ನಿರ್ದೇಶಕರು, ಗ್ರೆಡ್ 2 ಸಮಾಜ ಕಲ್ಯಾಣ ಇಲಾಖೆ ಸುಳ್ಯ ,ಸೂಂತೋಡು ದಂತ ಚಿಕಿತ್ಸಾಲಯದ ವೈದ್ಯ ಡಾ.ರೆವಂತ್ ಸೂಂತೋಡು, ಶಶ್ಮಿ ಭಟ್ ಅಜ್ಜಾವರ ,ಸುಳ್ಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪರಾಧಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಾಧ್ಯಕ್ಷ ಪುಷ್ಪರಾಜ್ ಪತ್ರಕರ್ತರಾದ ಮಿಥುನ್ ಕರ್ಲಪಾಡಿ,ರಮೇಶ್‌ ನಿರಬಿದರೆ,ಶ್ರೀಧರ್ ಕಜೆಗದ್ದೆ,ಅನಿಲ್ ಕರ್ಕೆರ ರಾಧಕೃಷ್ಣ ಮಾಣಿಬೆಟ್ಟು,ವಿಶೇಷ ಚೇತನ ಮಕ್ಕಳ ಶಾಲೆ ಮುಖ್ಯ ಶಿಕ್ಷಕಿ ಹರಿಣಿಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಷೇಷ ಚೇತನ ಮಕ್ಕಳ ಜೊತೆಗೆ ಪ್ರಥಮ ಬಾರಿಗೆ ತಮ್ಮ 53 ನೇ ಹುಟ್ಟುಹಬ್ಬವನ್ನು ಆಚರಿಸಿದರು . ಈ ಸಂದರ್ಭದಲ್ಲಿ ಮಾತನಾಡುತ್ತಾ ಇಂತಹ ಮಕ್ಕಳನ್ನು ನೋಡಿಕೊಳ್ಳುವುದೇ ಬಹಳ ಕಷ್ಟದ ಕೆಲಸವಾಗಿದೆ ನನಗು ಇಂತಹ ವಿಷೇಷ ಚೇತನ ಮಗನಿದ್ದು ಆತನ ಆರೈಕೆಯಿಂದ ನಾವು ಬಹಳಷ್ಟು ಕಲಿತಿದ್ದೇವೆ.ಇಂತಹ ಮಕ್ಕಳನ್ನು ಪ್ರಚಾರಕ್ಕೆ ಬಳಸದೇ ಅವರ ಒಳಿತಿಗಾಗಿ ಕೆಲಸ ಮಾಡೋಣ ಎಂದು ಹೇಳಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಕಲರ್ ಚಾಕ್ ಬಾಕ್ಸ್ ಹಾಗೂ ಸಿಹಿ ತಿಂಡಿ ವಿತರಿಸಿದರು.